ಸೋಮವಾರ, ಜೂನ್ 21, 2021
23 °C
ಎರಡು ಸಾವಿರ ಸಮೀಪಿಸುತ್ತಿರುವ ಸೋಂಕಿತರು

ತುಮಕೂರು: 883 ಸಕ್ರಿಯ ಕೊರೊನಾ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಇಲ್ಲಿಯವರೆಗೂ 1,047 ರೋಗಿಗಳು ಗುಣಮುಖರಾಗಿದ್ದಾರೆ. ಈ ಮೂಲಕ ಸೋಂಕಿಗೆ ತುತ್ತಾದ ಅರ್ಧಕ್ಕಿಂತಲೂ ಹೆಚ್ಚು ಜನರಿಗೆ ಕಾಯಿಲೆ ವಾಸಿಯಾಗಿದೆ. ಜಿಲ್ಲೆಯಲ್ಲಿ ಸದ್ಯ 883 ಸಕ್ರಿಯ ಪ್ರಕರಣಗಳು ಇವೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 76 ಮಂದಿ ಗುಣಮುಖರಾಗಿ ಸೋಮವಾರ ಬಿಡುಗಡೆಯಾದರು.

ಸೋಮವಾರ ಮತ್ತೆ 72 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1988 ತಲುಪಿದೆ. ಅಲ್ಲದೆ ತುಮಕೂರಿನ ಕ್ಯಾತ್ಸಂದ್ರದ 76 ವರ್ಷದ ಮಹಿಳೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ 58 ತಲುಪಿದೆ. ಸೋಮವಾರ 41 ಪುರುಷರಿಗೆ 31 ಮಹಿಳೆಯರಿಗೆ ಸೋಂಕು ದೃಢವಾಗಿದೆ. ಇವರಲ್ಲಿ ಇಬ್ಬರು ಐದು ವರ್ಷದ ಒಳಗಿನ ಮಕ್ಕಳೂ ಇದ್ದಾರೆ.

ತಾಲ್ಲೂಕು;ಇಂದಿನ ಸೋಂಕಿತರು (ಆ.3);ಒಟ್ಟು ಸೋಂಕಿತರು;ಮರಣ

ಚಿ.ನಾ.ಹಳ್ಳಿ;4;116;3

ಗುಬ್ಬಿ;4;98;3

ಕೊರಟಗೆರೆ;7;98;2

ಕುಣಿಗಲ್;12;195;3

ಮಧುಗಿರಿ;5;141;2

ಪಾವಗಡ;2;157;1

ಶಿರಾ;2;127;3

ತಿಪಟೂರು;3;129;1

ತುಮಕೂರು;28;829;40

ತುರುವೇಕೆರೆ;5;98;0

ಒಟ್ಟು;72;1988;58

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.