ಕುಣಿಗಲ್: ಪಟ್ಟಣದ ಕುವೆಂಪು ನಗರದ ಶೆಡ್‌ನಲ್ಲಿ ಕಲ್ಲಿನಿಂದ ಜಜ್ಜಿ ಕೂಲಿ ಕಾರ್ಮಿಕ ರವಿ (38) ಎಂಬುವರನ್ನು ಕೊಲೆ ಮಾಡಲಾಗಿದೆ.
ರವಿ ತಾಲ್ಲೂಕಿನ ಬಾಗೆನಹಳ್ಳಿ ಗ್ರಾಮದ ನಿವಾಸಿ. ಕುವೆಂಪು ನಗರದ ಶಿವಣ್ಣ ಎಂಬುವರು ಕಟ್ಟಡ ಸಾಮಗ್ರಿ ಸಂಗ್ರಹಕ್ಕಾಗಿ ನಿರ್ಮಿಸಲಾಗಿರುವ ಶೆಡ್‌ನಲ್ಲಿ ಘಟನೆ ಸಂಭವಿಸಿದೆ.
ಮತ್ತೊಬ್ಬ ಕೂಲಿಕಾರ್ಮಿಕ ಮಳವಳ್ಳಿಯ ಶಿವಕುಮಾರ್ ಜತೆ ಶೆಡ್‌ನಲ್ಲಿ ತಂಗಿದ್ದರು. ಮಾಲೀಕರ ಮಗ ರಂಗಸ್ವಾಮಿ ಸೋಮವಾರ ಬೆಳಗಿನ ಜಾವ ಶೆಡ್ ಬೀಗ ತೆಗೆದು ನೋಡಿದಾಗ ರವಿಯ ಮೃತದೇಹ ಕಂಡು ಬಂದಿದೆ. ಶಿವಕುಮಾರ್ ಪರಾರಿಯಾಗಿದ್ದಾನೆ. ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.