ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಕು-ಚೂರಿ ಸಂಸ್ಕೃತಿಯತ್ತ ಯುವ ಜನತೆ: ಲೇಖಕಿ ಬಾ.ಹ.ರಮಾಕುಮಾರಿ ಆತಂಕ

Published 27 ಮೇ 2024, 14:13 IST
Last Updated 27 ಮೇ 2024, 14:13 IST
ಅಕ್ಷರ ಗಾತ್ರ

ತುಮಕೂರು: ಯುವ ಜನತೆ ಪ್ರೀತಿ–ಪ್ರೇಮಕ್ಕೆ ಬಲಿಯಾಗಿ ಕ್ರೌರ್ಯದ ಉನ್ಮಾದಕ್ಕೆ ಇಳಿಯುತ್ತಿದ್ದಾರೆ. ಚಾಕು-ಚೂರಿ ಸಂಸ್ಕೃತಿಗೆ ಹೊರಳುತ್ತಿದ್ದಾರೆ ಎಂದು ಲೇಖಕಿ ಬಾ.ಹ.ರಮಾಕುಮಾರಿ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ, ಇನ್ನರ್‌ ವ್ಹೀಲ್‌ ಕ್ಲಬ್‌ ಆಫ್‌ ತುಮಕೂರು ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

ಯುವ ಜನತೆಯಲ್ಲಿ ಕ್ರೌರ್ಯ, ದೌರ್ಜನ್ಯ, ದ್ವೇಷದ ಮನೋಭಾವ ಹೆಚ್ಚುತ್ತಿದೆ. ಶಾಲಾ–ಕಾಲೇಜುಗಳಲ್ಲಿ ಕಲಿತು ಭವಿಷ್ಯ ರೂಪಿಸಿಕೊಳ್ಳಬೇಕಾದವರು ಹಾದಿ ತಪ್ಪುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ. ಮಕ್ಕಳಿಗೆ ಅರಿವಿನ ಶಿಕ್ಷಣ ನೀಡಬೇಕು. ಕೆಟ್ಟ ಸಂಸ್ಕೃತಿ ವಿರುದ್ಧ ಆಂದೋಲನ ರೂಪಿಸಬೇಕು. ಇಲ್ಲದಿದ್ದರೆ ಪ್ರೀತಿಯ ಹೆಸರಿನಲ್ಲಿ ಕ್ರೌರ್ಯ ಹೆಚ್ಚುತ್ತದೆ. ಇದನ್ನು ಈಗಿನಿಂದಲೇ ತಡೆಯಬೇಕು. ಮನೆ ಮತ್ತು ಶಾಲೆಗಳಲ್ಲಿ ವಿದ್ಯಾರ್ಥಿಗೆ ಮಾನವೀಯತೆಯ ಪಾಠ ಹೇಳಿ ಕೊಡಬೇಕು ಎಂದು ಸಲಹೆ ಮಾಡಿದರು.

ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ, ಪದಾಧಿಕಾರಿಗಳಾದ ಸಿ.ಎಲ್.ಸುನಂದಮ್ಮ, ಗಂಗಲಕ್ಷ್ಮಿ, ಇನ್ನರ್ ವ್ಹೀಲ್ ಕ್ಲಬ್‌ ಅಧ್ಯಕ್ಷೆ ಭಾಗ್ಯಲಕ್ಷ್ಮಿ ನಾಗರಾಜ್‌, ಹೇಮಾ ಮಲ್ಲಿಕಾರ್ಜುನ್, ರೇಖಾ ಶಿವಕುಮಾರ್, ಲತಾ ನಾರಾಯಣ್, ಸಾಂತ್ವನ ಕೇಂದ್ರದ ಸಮಾಲೋಚಕರಾದ ಪಾರ್ವತಮ್ಮ, ಯುವರಾಣಿ, ನೇತ್ರಾ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT