ಕುಣಿಗಲ್: ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಸಹಕಾರದೊಂದಿಗೆ ತಾಲ್ಲೂಕಿನ ಕಿಚ್ಚವಾಡಿ ಗ್ರಾಮದ ಚಿಕ್ಕಮ್ಮ ದೇವಿ ದೇಗುಲಕ್ಕೆ ಗುರುವಾರ ದಲಿತ ಕುಟುಂಬ ಪ್ರವೇಶಿಸಿ ಪೂಜೆ ಸಲ್ಲಿಸಿತು.

ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ, ಕಿಚ್ಚವಾಡಿ ಗ್ರಾಮದಲ್ಲಿ ಚನ್ನಕೇಶವ, ಬಸವೇಶ್ವರ, ಲಕ್ಷ್ಮಿದೇವಿ, ಹುಚ್ಚಮ್ಮ ದೇವಿ, ಮಹಾದೇವಿ, ಮಾಸ್ತಮ್ಮ, ಕೋಣೆ ಚಿಕ್ಕಮ್ಮ ದೇವಸ್ಥಾನಗಳಿವೆ. ಎಲ್ಲ ದೇವಸ್ಥಾನಗಳಿಗೂ ಎಲ್ಲ ಸಮುದಾಯದವರಿಗೂ ಮುಕ್ತ ಪ್ರವೇಶ ಕಲ್ಪಿಸಿದ್ದರೂ ಕೋಣೆ ಚಿಕ್ಕಮ್ಮ ದೇವಿ ದೇವಸ್ಥಾನಕ್ಕೆ ಮಾತ್ರ ದಲಿತರಿಗೆ ಪ್ರವೇಶ ನಿರಾಕರಿಸಲಾಗಿತ್ತು.

ಗ್ರಾಮದ ದಲಿತ ಕುಟುಂಬದ ಗೋಪಿ ಜಯಪ್ರಕಾಶ್ ಚಿಕ್ಕಮ್ಮ ದೇವಿ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕಳೆದ ಬಾರಿ ನಡೆದ ಪರಿಶಿಷ್ಟರ ಕುಂದುಕೊರತೆ ಸಭೆಯಲ್ಲಿ ಮನವಿ ಮಾಡಿದ್ದರು.

ಡಿವೈಎಸ್ಪಿ, ತಹಶೀಲ್ದಾರ್ ನೇತೃತ್ವದಲ್ಲಿ ಅಕ್ಟೋಬರ್ 6ರಂದು ದೇವಾಲಯ ಪ್ರವೇಶ ಕಲ್ಪಿಸಲು ಹೋದಾಗ ಕೆಲವರು ಅಡ್ಡಿಪಡಿಸಿದ್ದರು. ಮತ್ತೆ ಸೆಪ್ಟೆಂಬರ್ 24ರಂದು ದೇವಾಲಯ ಪ್ರವೇಶಿಸಲು ಗೋಪಿ ಜಯಪ್ರಕಾಶ್ ಕುಟುಂಬ ಮನವಿ ಮಾಡಿದ್ದರೂ ಫಲಕಾರಿಯಾಗಿರಲಿಲ್ಲ.

ಅರ್ಜಿದಾರರು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಿದ್ದರು. ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯಲ್ಲಿ ವಿಷಯ ಚರ್ಚೆಗೆ ಬಂದು ಅಕ್ಟೋಬರ್ 30ರಂದು ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಾಲ್ಲೂಕು ಆಡಳಿತಕ್ಕೆ ನಿರ್ದೇಶನ ನೀಡಿದ್ದರು.

ತಾಲ್ಲೂಕು ಆಡಳಿತ ಗುರುವಾರ ಗ್ರಾಮಕ್ಕೆ ತೆರಳಿ ದೇವಸ್ಥಾನದ ಪ್ರಮುಖರು ಮತ್ತು ಅರ್ಚಕ ಹಾಗೂ ಗ್ರಾಮಸ್ಥರೊಂದಿಗೆ ಮಾತನಾಡಿ ಗ್ರಾಮಸ್ಥರ ಸಮ್ಮುಖದಲ್ಲಿ ದಲಿತರಿಗೆ ದೇವಾಲಯ ಪ್ರವೇಶ ಕಲ್ಪಿಸಲು ಸಾಕಷ್ಟು ಕಸರತ್ತು ನಡೆಸಿದರೂ ಗ್ರಾಮಸ್ಥರು ಒಪ್ಪದ ಕಾರಣ ದೇವಸ್ಥಾನದ ಬೀಗ ಪಡೆದ ಅಧಿಕಾರಿಗಳು ದೇವಾಲಯದ ಬೀಗ ತೆಗೆಸಿ ದಲಿತ ಕುಟುಂಬಕ್ಕೆ ದೇವಾಲಯ ಪ್ರವೇಶ, ಪೂಜೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಡಿವೈಎಸ್ಪಿ ಓಂಪ್ರಕಾಶ್, ತಹಶೀಲ್ದಾರ್ ರಶ್ಮಿ, ಅಮೃತೂರು ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಗೌಡ, ಪಿಎಸ್ಐ ಪ್ರಶಾಂತ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಿವಲಿಂಗಯ್ಯ, ರಾಜಸ್ವ ನಿರೀಕ್ಷಕ ಪುರುಷೋತ್ತಮ್, ಪಿಡಿಒ ನಾಗರಾಜು, ದಲಿತ ಸಂಘಟನೆ ಬಿ.ಜಿ. ಗಂಗಾಧರ್, ದಲಿತ್ ನಾರಾಯಣ್, ಎಸ್.ಟಿ. ರಾಜು, ರಾಜು ವೆಂಕಟಪ್ಪ, ರಾಮಕೃಷ್ಣ, ಶಿವರಾಮ, ಸತೀಶ್, ಪ್ರಶಾಂತ್, ತಿಮ್ಮಪ್ಪ, ಪ್ರಕಾಶ್, ಅನಿಲ್, ಶಿವರಾಜು ಹಾಜರಿದ್ದರು.