ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಸಾಲ ಬಾಕಿ: ಸೊಗಡು ಶಿವಣ್ಣಗೆ ಸೇರಿದ ಕಟ್ಟಡಕ್ಕೆ ಬೀಗ

Published 17 ಜನವರಿ 2024, 4:42 IST
Last Updated 17 ಜನವರಿ 2024, 4:42 IST
ಅಕ್ಷರ ಗಾತ್ರ

ತುಮಕೂರು: ಸಾಲ ಮರುಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ ಸೇರಿದ ನಗರದ ರೇಣುಕಾ ವಿದ್ಯಾಪೀಠ ರಸ್ತೆಯಲ್ಲಿರುವ (ಖಾಸಗಿ ಬಸ್ ನಿಲ್ದಾಣದ ಪಕ್ಕ) ಎಸ್.ಎಸ್.ರೆಸಿಡೆನ್ಸಿಗೆ ಮಂಗಳವಾರ ವೈಶ್ಯ ಕೋ–ಆಪರೇಟಿವ್ ಬ್ಯಾಂಕ್ ಅಧಿಕಾರಿಗಳು ಬೀಗ ಹಾಕಿ ವಶಕ್ಕೆ ಪಡೆದಿದ್ದಾರೆ.

ಎಸ್‌.ಎಸ್.ರೆಸಿಡೆನ್ಸಿಯನ್ನು (ಬಾರ್ ಹಾಗೂ ವಸತಿಗೃಹ) ಒತ್ತೆ ಇಟ್ಟು ವೈಶ್ಯ ಕೋ–ಆಪರೇಟಿವ್ ಬ್ಯಾಂಕ್‌ನ ವಿವೇಕಾನಂದ ರಸ್ತೆ ಶಾಖೆಯಿಂದ ಸುಮಾರು ₹12 ಕೋಟಿ ಸಾಲ ಪಡೆದುಕೊಂಡಿದ್ದರು. ಈಗ ಸಾಲದ ಅಸಲು ಹಾಗೂ ಬಡ್ಡಿ ಸೇರಿ ಸುಮಾರು ₹24 ಕೋಟಿ ಪಾವತಿ ಮಾಡಬೇಕಿದ್ದು, ಸಾಲ ವಸೂಲಿ ಮಾಡುವ ಸಲುವಾಗಿ ಕಟ್ಟಡಕ್ಕೆ ಬೀಗ ಹಾಕಲಾಯಿತು ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಕಟ್ಟಡದಲ್ಲಿದ್ದ ಗ್ರಾಹಕರನ್ನು ಹೊರಗೆ ಕಳುಹಿಸಿ ವಕೀಲರ ಸಮ್ಮುಖದಲ್ಲಿ ಬೀಗ ಹಾಕಲಾಯಿತು. ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT