ವೇತನ, ಭವಿಷ್ಯ ನಿಧಿಗಾಗಿ ಆಗ್ರಹ: ಸ್ಕಾಟ್ಸ್‌ ಗಾರ್ಮೆಂಟ್ಸ್‌ ನೌಕರರ ಪ್ರತಿಭಟನೆ

7
ಜಿಲ್ಲಾಧಿಕಾರಿ ಕಚೇರಿ ಎದುರು ಎಂಎಲ್‌ಸಿ ನಜೀರ್‌ ಅಹ್ಮದ್‌ ಮಾಲೀಕತ್ವದ ಸ್ಕಾಟ್ಸ್‌ ಗಾರ್ಮೆಂಟ್ಸ್‌

ವೇತನ, ಭವಿಷ್ಯ ನಿಧಿಗಾಗಿ ಆಗ್ರಹ: ಸ್ಕಾಟ್ಸ್‌ ಗಾರ್ಮೆಂಟ್ಸ್‌ ನೌಕರರ ಪ್ರತಿಭಟನೆ

Published:
Updated:
Deccan Herald

ತುಮಕೂರು: 3 ತಿಂಗಳಿಂದ ವೇತನ ಮತ್ತು ವರ್ಷದಿಂದ ಭವಿಷ್ಯ ನಿಧಿ ನೀಡುತ್ತಿಲ್ಲ ಎಂದು ಆಗ್ರಹಿಸಿ ಸ್ಕಾಟ್ಸ್‌ ಗಾರ್ಮೆಂಟ್ಸ್‌ ನೌಕರರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.

ಈ ಕಂಪನಿಯೂ ಈಗಿನ ವಿಧಾನ ಪರಿಷತ್‌ ಸದಸ್ಯ, ಕೋಲಾರದ ನಜೀರ್‌ ಅಹ್ಮದ್‌ ಅವರ ಮಾಲೀಕತ್ವದಲ್ಲಿದ್ದು, ಸುಮಾರು 800 ಜನ ಮಹಿಳಾ ನೌಕರರಿದ್ದು ಎಲ್ಲರಿಗೂ ಸಂಬಳ ಮತ್ತು ಭವಿಷ್ಯ ನಿಧಿ ನೀಡುತ್ತಿಲ್ಲ. ಹಾಗಾಗಿ ಕೂಡಲೇ ನೌಕರರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕಂಪನಿಯೂ ಆಗಸ್ಟ್‌ 14 ರಂದು ಲಾಕ್‌ಔಟ್‌ ಆಗಿದೆ ಎನ್ನಲಾಗಿದೆ. ಆದರೆ ಕಂಪನಿಯವರು ನಾವು ಯಾವುದೇ ಕಾರಣಕ್ಕೆ ಕಂಪನಿಯನ್ನು ಮುಚ್ಚುವುದಿಲ್ಲ ನಿಮ್ಮ ಕೆಲಸ ಮುಂದುವರೆಸಿ ನಿಮ್ಮ ಸಂಬಳವನ್ನು ನೀಡುತ್ತೇವೆ ಎಂದು ಭರವಸೆ ನೀಡಿ ಈವರೆಗೂ ಕೆಲಸ ಮಾಡಿಸಿಕೊಂಡಿದ್ದಾರೆ. ಆದರೆ ಈಗ ಕಂಪನಿಯವರು ತಲೆ ಮರೆಸಿಕೊಂಡಿದ್ದಾರೆ. ಹಾಗಾಗಿ ಕೂಡಲೇ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್‌ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಈಗಾಗಲೇ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜವಾಗಿಲ್ಲ. ಇವರಿಂದಲೂ ನ್ಯಾಯ ದೊರಕದಿದ್ದಲ್ಲಿ ಇನ್ನು ಯಾರನ್ನು ಕೇಳಬೇಕು ಎಂದು ಗಾರ್ಮೆಂಟ್ಸ್‌ ನೌಕರರು ಕಳವಳ ವ್ಯಕ್ತಪಡಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !