ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಿಗೇನಹಳ್ಳಿ | ಗಾಳಿಗೆ 6 ಎಕರೆ ಬಾಳೆ ಬೆಳೆ ನಾಶ 

Last Updated 28 ಮೇ 2020, 5:22 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ ( ಮಧುಗಿರಿ ತಾ):ಬುಧವಾರ ಸಂಜೆ ಬೀಸಿದ ಬಾರಿ ಗಾಳಿಗೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಮೈದನಹೊಸಹಳ್ಳಿ ಗ್ರಾಮದ ಎಂ. ವಿಶ್ವನಾಥರೆಡ್ಡಿ ಅವರು 6 ಎಕರೆಯಲ್ಲಿ ಬೆಳೆದಿದ್ದ ಬಾಳೆ ತೋಟ ನಾಶವಾಗಿದೆ.

ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದರು. 15 ರಿಂದ 18 ಕೆಜಿ ತೂಗುವ ಗೊನೆಗಳು ಬಿಟ್ಟಿದ್ದವು. ಸುಮಾರು 15 ರಿಂದ 16 ಲಕ್ಷದ ಲಾಭದ ನಿರೀಕ್ಷೆಯಲ್ಲಿದ್ದರು.ಇನ್ನೇನು ತಿಂಗಳಲ್ಲಿ ಕಟಾವು ಮಾಡಬೇಕಿತ್ತು.

ನಮಗೆ ದಿಕ್ಕು ಕಾಣದಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ನಮ್ಮ ಕಷ್ಟಕ್ಕೆ ಕೈಹಿಡಿಯದಿದ್ದರೆ ಬದುಕು ಬೀದಿಪಾಲಾಗಲಿದೆ ಎಂದು ರೈತ ಎಂ. ವಿಶ್ವನಾಥರೆಡ್ಡಿ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT