ಶುಕ್ರವಾರ, ಡಿಸೆಂಬರ್ 3, 2021
26 °C

ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ಲಯನ್ಸ್ ಕ್ಲಬ್ ಆಫ್ ಕುಣಿಗಲ್ ಸ್ನೇಹ ಮತ್ತು ನ್ಯೂ ತುಮಕೂರು ಜಿಲ್ಲಾ ಚೆಸ್ ಅಸೋಸಿಯೇಷನ್‌ನಿಂದ ಅ. 24ರಂದು ಬೆಳಿಗ್ಗೆಯಿಂದ ಸಂಜೆವರೆಗೆ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯನ್ನು ಪಟ್ಟಣದ ಎಸ್.ಎಸ್ ಪಾರ್ಟಿ ಹಾಲ್‌ನಲ್ಲಿ ಏರ್ಪಡಿಸಲಾಗಿದೆ.

ಪಂದ್ಯಾವಳಿ 11 ವರ್ಷದ ಒಳಗೆ, 15 ವರ್ಷದ ಒಳಗೆ ಮತ್ತು ಸಾಮಾನ್ಯ (ಓಪನ್) ಹೀಗೆ ಮೂರು ವಿಭಾಗದಲ್ಲಿ ನಡೆಯಲಿದೆ. ಓಪನ್ ವಿಭಾಗದಲ್ಲಿ ₹ 10 ಸಾವಿರ ಬಹುಮಾನ ಮತ್ತು ಟ್ರೋಫಿ, ಉಳಿದ ಎರಡು ವಿಭಾಗದ ಮಕ್ಕಳಿಗೆ ತಲಾ 10 ಟ್ರೋಫಿ ನೀಡಲಾಗುವುದು.

ಭಾಗವಹಿಸಿದ ಎಲ್ಲರಿಗೂ ಸರ್ಟಿಫಿಕೇಟ್ ನೀಡಲಾಗುತ್ತದೆ. ಹನ್ನೊಂದು ಮತ್ತು ಹದಿನೈದು ವರ್ಷ ಒಳಗಿನವರಿಗೆ ₹ 250 ಹಾಗೂ ಓಪನ್ ವಿಭಾಗಕ್ಕೆ ₹ 400 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್ ಮೂಲಕ ಪ್ರವೇಶ ಬಯಸುವವರು ಮೊಬೈಲ್‌ 94485 15928 ಅಥವಾ 98452 30720 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು