ಮಂಗಳವಾರ, ಜುಲೈ 14, 2020
28 °C

ಗುರುಪೂರ್ಣಿಮೆ ಪ್ರಯುಕ್ತ ಭಿಕ್ಷಾಟನೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಇಲ್ಲಿನ ಕುಣಿಗಲ್ ರಸ್ತೆಯಲ್ಲಿರುವ ರಾಮಕೃಷ್ಣ ನಗರದ  ಶಿರಡಿ ಸಾಯಿನಾಥ ಸೇವಾ ಸಮಿತಿ ವತಿಯಿಂದ ಗುರುಪೂರ್ಣಿಮೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಭಿಕ್ಷಾಟನೆಗೆ ಕಾರ್ಯಕ್ರಮಕ್ಕೆ ಸಂಸದ ಜಿ.ಎಸ್. ಬಸವರಾಜು ಅವರು ಮಹಿಳೆಯರ ಜೋಳಿಗೆಗೆ ದಾನ ನೀಡುವ ಮೂಲಕ ಚಾಲನೆ ನೀಡಿದರು.

ಸಾಯಿಬಾಬಾ ದೇವಾಲಯದಿಂದ ಆರಂಭವಾದ ಭಿಕ್ಷಾಟನೆ ಕಾರ್ಯಕ್ರಮ ಸದಾಶಿವನಗರ, ಸರಸ್ವತಿಪುರಂ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ನಡೆಯಿತು.

ನಾಳೆಯ ಗುರುಪೂರ್ಣಿಮೆ ಪ್ರಯುಕ್ತ ಈ ಭಿಕ್ಷಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿಯವರು ತಿಳಿಸಿದರು.

ಭಿಕ್ಷಾಟನೆ ಕಾರ್ಯಕ್ರಮದಲ್ಲಿ ದೇವಾಲಯದ ಕೆ.ಎಲ್.ಗುರುಸಿದ್ದಪ್ಪ, ರಾಮಚಂದ್ರಪ್ಪ, ಧನಿಯಾಕುಮಾರ್, ಸತ್ಯಮಂಗಲದ ಸದಣ್ಣ, ವೇಣುಗೋಪಾಲ್, ರಮೇಶ್ ನಿಸರ್ಗ, ಎ.ಆರ್.ನಾಗರಾಜು, ನೇರಳಾಪುರ ಕುಮಾರ್, ವಿಜಯಕುಮಾರ್, ಶಿವಕುಮಾರ್, ಗೋಪಿ ಭಾಗವಹಿಸಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು