ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರ ಗ್ಯಾಜೆಟ್‌ ಮಾಹಿತಿ ಸಂಗ್ರಹ

ವಿದ್ಯಾರ್ಥಿಗಳ ಜತೆ ಶೈಕ್ಷಣಿಕ ಸಂವಹನಕ್ಕೆ ತಾಂತ್ರಿಕತೆಯ ಮೊರೆ
Last Updated 5 ಮೇ 2020, 15:46 IST
ಅಕ್ಷರ ಗಾತ್ರ

ತುಮಕೂರು: ಲಾಕ್‌ಡೌನ್‌ ದಿನಗಳಲ್ಲಿ ಮನೆಯಿಂದ ಕೆಲಸ ಮಾಡುವ ರೀತಿಯಲ್ಲಿ ಶಾಲಾ ಕಲಿಕೆಯೂ ಸಾಧ್ಯವೇ ಎಂದು ಶಿಕ್ಷಣ ಇಲಾಖೆ ಪರಿಶೀಲನೆ ನಡೆಸುತ್ತಿದೆ. ಸ್ಮಾರ್ಟ್‌ಫೋನ್‌ ಹೊಂದಿರುವ ವಿದ್ಯಾರ್ಥಿಗಳೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಶೈಕ್ಷಣಿಕ ಸಂವಹನ ನಡೆಸಲು ಇಲಾಖೆ ಚಿಂತಿಸುತ್ತಿದೆ.

ವಿದ್ಯಾರ್ಥಿಗಳ ಪೋಷಕರು, ಶಿಕ್ಷಕರ ಬಳಿ ಸ್ಮಾರ್ಟ್‌ ಫೋನ್‌, ಡೆಸ್ಕ್‌ಟಾಪ್‌, ಲ್ಯಾಪ್‌ಟಾಪ್‌ ಇದೆಯೇ ಮತ್ತು ಅವುಗಳಿಗೆ ಅಂತರ್ಜಾಲ ಸಂಪರ್ಕ ಇದೆಯೇ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದೆ. ಮುಂಬರುವ ದಿನಗಳಲ್ಲಿ ವಾಟ್ಸ್‌ ಆ್ಯಪ್‌, ಟೆಲಿಗ್ರಾಮ್‌, ಯೂಟೂಬ್‌, ಲೈವ್‌ ವಿಡಿಯೊ ಮೂಲಕ ಕಲಿಕೆಯ ಸಂವಹನ ಸಾಧಿಸುವುದು ಈ ಮಾಹಿತಿ ಸಂಗ್ರಹದ ಉದ್ದೇಶವಾಗಿದೆ ಎನ್ನಲಾಗುತ್ತಿದೆ.

‘ವಿದ್ಯಾರ್ಥಿಗಳ ದಾಖಲಾತಿ ವೇಳೆ ಅವರ ಪೋಷಕರ ಮೊಬೈಲ್‌ ನಂಬರ್‌ ಪಡೆಯಲಾಗಿರುತ್ತದೆ. ಪೋಷಕರಿಗೆ ಫೋನಾಯಿಸಿ, ಇರುವ ಗ್ಯಾಜೆಟ್‌ಗಳ ಮಾಹಿತಿ ಪಡೆಯಲು ಎಲ್ಲ ಮುಖ್ಯ ಶಿಕ್ಷಕರಿಗೆ ಸೂಚಿಸಿದ್ದೇವೆ. ಆಯಾ ಶಾಲಾ ಶಿಕ್ಷಕರು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್.ಕಾಮಾಕ್ಷಿ ತಿಳಿಸಿದರು.

‘ಸಂಗ್ರಹಿಸಿದ ಮಾಹಿತಿಯನ್ನು ಆಯಾ ಶಾಲಾ ಶಿಕ್ಷಕರೇ ನೇರವಾಗಿ ‘ವಿದ್ಯಾರ್ಥಿ ಸಾಧನೆಯ ದಾಖಲೆಯ ವ್ಯವಸ್ಥೆ’ (ಎಸ್ಎಟಿಎಸ್) ತಂತ್ರಾಂಶಕ್ಕೆ ಅಪ್‌ಲೋಡ್ ಮಾಡುತ್ತಾರೆ. ಅದನ್ನು ಮುಂಬರುವ ದಿನಗಳಲ್ಲಿ ಕೇಂದ್ರ ಕಚೇರಿಯ ನಿರ್ದೇಶನದ ಮೇರೆಗೆ ಕಲಿಕೆಗೆ ಪೂರಕವಾಗಿ ಬಳಸಿಕೊಳ್ಳಲಾಗುವುದು’ ಎಂದು ಹೇಳಿದರು.

‘ಗ್ರಾಮೀಣ ಪ್ರದೇಶದ ಎಲ್ಲ ಪೋಷಕರ ಬಳಿಯೂ ಸ್ಮಾರ್ಟ್‌ ಫೋನ್‌ ಇರಲಾರದು. ಇರುವ ಮಕ್ಕಳೊಂದಿಗೆ ಸಂವಹನ ಮಾಡಲು ಇದು ನೆರವಾಗಲಿದೆ’ ಎಂದರು.

**

ಪರೀಕ್ಷಾ ತಯಾರಿಗೆ ಎನ್‌ಜಿಒ ನೆರವು

‘ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ಸ್ಯಾನಿಟೈಸರ್‌, ಮಾಸ್ಕ್‌ ವ್ಯವಸ್ಥೆ ಮಾಡಲು ಸೂಚನೆ ಬಂದಿದೆ. ಸ್ಯಾನಿಟೈಸರ್‌ ಅನ್ನು ಬೆಂಗಳೂರಿನ ಕೇಂದ್ರ ಕಚೇರಿಯಿಂದಲೇ ಪೂರೈಸುವುದಾಗಿ ತಿಳಿಸಿದ್ದಾರೆ. ಸ್ವಯಂ ಸೇವಾ ಸಂಸ್ಥೆಗಳಿಂದ (ಎನ್‌ಜಿಒ) ಮಾಸ್ಕ್‌ಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ. ತುಮಕೂರು ಶೈಕ್ಷಣಿಕ ಜಿಲ್ಲೆಯೊಂದಕ್ಕೆ ಸುಮಾರು 25 ಸಾವಿರ ಮಾಸ್ಕ್‌ ಬೇಕಾಗಬಹುದು’ ಎಂದು ಎಂ.ಆರ್.ಕಾಮಾಕ್ಷಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT