ಜೋಗಯ್ಯನಪಾಳ್ಯದ ಬೈರಣ್ಣ ಅವರ ಪತ್ನಿ ಮದ್ದಮ್ಮ ಅವರು ಗ್ರಾಮದಲ್ಲಿ ಶನಿವಾರ ನಡೆದ ದೇವರ ಉತ್ಸವದಲ್ಲಿ ಓಡಾಡಿಕೊಂಡಿದ್ದರು. ಬೆಳಿಗ್ಗೆ ಶವವಾಗಿರುವುದು ಗ್ರಾಮಸ್ಥರಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಇದು ಕೊಲೆ ಇರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಮಹಿಳೆಯ ಮೇಲೆ ಇದ್ದ ಚಿನ್ನದ ಸರ ಸಹ ನಾಪತ್ತೆಯಾಗಿದೆ.