ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಲ್ಲಿ ಗ್ರೇಡ್ -2 ತಹಶೀಲ್ದಾರ್ ಸಹಿ ನಕಲು ಮಾಡಿ ನಕಲಿ ಮರಣ ಪ್ರಮಾಣ ಪತ್ರ ನೀಡಿದ ಆರೋಪದಲ್ಲಿ ‘ಡಿ’ ದರ್ಜೆ ನೌಕರ ಶಿವಕುಮಾರ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಆದೇಶಿಸಿದ್ದಾರೆ.

ಲಂಚಮುಕ್ತ ವೇದಿಕೆಯ ವಾಟ್ಸ್ಆ್ಯಪ್ ಗ್ರೂಪಿನಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಚೇರಿಯಲ್ಲಿ ನೀಡಿರುವ ಪ್ರಮಾಣ ಪತ್ರ ನಕಲು ಎಂದು ಆರೋಪ ಮಾಡಿತ್ತು. ಈ ಸಂಬಂಧ ಏಪ್ರಿಲ್ 22ರಂದು ತಹಶೀಲ್ದಾರ್ಗೆ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು.

ಹುಳಿಯಾರು ಹೋಬಳಿ ತಮ್ಮಡಿಹಳ್ಳಿ ಮತ್ತು ಗೊಲ್ಲರಟ್ಟಿ ಗ್ರಾಮಗಳಿಂದ ಮರಣ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿದ್ದ ರಾಜಯ್ಯ ಹಾಗೂ ಬಸವರಾಜು ಅವರನ್ನು ಕಚೇರಿಗೆ ಕರೆಯಿಸಿ ಗ್ರೇಡ್ 1 ತಹಶೀಲ್ದಾರ್, ಗ್ರೇಡ್– 2 ಹಾಗೂ ಶಿರಸ್ತೇದಾರ ಅವರ ಸಮ್ಮುಖದಲ್ಲಿ ವಿಡಿಯೊ ಸಹಿತ ಹೇಳಿಕೆ ಪಡೆದುಕೊಳ್ಳಲಾಯಿತು.

ತಾಲ್ಲೂಕು ಡಿ.ದರ್ಜೆ ನೌಕರ ಶಿವಕುಮಾರ್ ನಕಲಿ ಮರಣ ದೃಢೀಕರಣ ಪತ್ರಕ್ಕೆ ₹2,000 ಲಂಚ ಪಡೆದಿದ್ದಲ್ಲದೆ, ಗ್ರೇಡ್–2 ತಹಶೀಲ್ದಾರ್ ಸಹಿ ನಕಲು ಮಾಡಿರುವುದು ಸಾಬೀತಾಗಿದೆ. ಈ ಸಂಬಂಧ ನೌಕರನ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.