ಭಾನುವಾರ, ಸೆಪ್ಟೆಂಬರ್ 26, 2021
24 °C

ನಿವೃತ್ತ ಯೋಧರಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ 22ನೇ ಕಾರ್ಗಿಲ್ ವಿಜಯದ ನೆನೆಪಿಗಾಗಿ ನಿವೃತ್ತ ಯೋಧರನ್ನು ಎಬಿವಿಪಿಯಿಂದ ಸನ್ಮಾನಿಸಲಾಯಿತು.

ನಿವೃತ್ತ ಯೋಧರಾದ ನಂಜುಂಡಯ್ಯ
ಮಾತನಾಡಿ, ‘ಕಾರ್ಗಿಲ್ ಯುದ್ಧ ಭೂಮಿ
ಯಲ್ಲಿ ಭಾರತವು ಪಾಕಿಸ್ತಾನವನ್ನು ಬಗ್ಗುಬಡಿದು ದಿಗ್ವಿಜಯ ಸಾಧಿಸಿ 22 ವರ್ಷಗಳಾದವು. ಮನೆ, ಕುಟುಂಬ ಸದಸ್ಯರಿಂದ ದೂರವಾಗಿದ್ದುಕೊಂಡು ದೇಶ ರಕ್ಷಣೆಗೆ ಲಕ್ಷಾಂತರ ಯೋಧರು ಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ, ತ್ಯಾಗವನ್ನು ಯುವಪೀಳಿಗೆ ನೆನೆಯುವಂತಾಗಬೇಕು’ ಎಂದರು.

ಈಗಿನ ಯುವಕರು ಸೇನೆ ಸೇರಲು ಮುಂದೆ ಬರಬೇಕು. ಸೇನೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಪ್ರಾಣವನ್ನು ಮುಡುಪಾಗಿಟ್ಟು ದೇಶ ಕಾಯುವ ಯೋಧರಿಗೆ ನಮ್ಮ ಜನರು ಋಣಿಯಾಗಿರಬೇಕು ಎಂದು ಹೇಳಿದರು.

ಕಾಲೇಜು ಪ್ರಾಂಶುಪಾಲರಾದ ಲೀಲಾವತಿ, ‘ಕಾರ್ಗಿಲ್ ಯುದ್ಧದಲ್ಲಿ ಸೈನಿಕರ ದೇಶ ಪ್ರೇಮದಿಂದಾಗಿ ಭಾರತ ಜ
ಯಗಳಿಸಿತು. ಯುದ್ಧದಲ್ಲಿ 520 ಸೈನಿಕರ ಬಲಿದಾನವಾಯಿತು. ದೇಶಕ್ಕಾಗಿ ಸರ್ವಸ್ವ
ವನ್ನು ಅರ್ಪಿಸಿದ ಯೋಧರ ಆದರ್ಶ
ಗಳು ಬದುಕಿನ ಬೆಳಕಾಗಬೇಕು’ ಎಂದರು.
ನಿವೃತ್ತ ಯೋಧರಾದ ಮುದ್ದಲಿಂಗೇಶ, ನಾಗರಾಜಯ್ಯ, ನಂಜುಂಡಯ್ಯ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕರಾದ ಸುಬ್ಬಯ್ಯ, ಶರ್ಮಾ, ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ, ನಗರ ಸಂಘಟನಾ ಕಾರ್ಯದರ್ಶಿ ಶಿವಕುಮಾರ, ನಗರ ಕಾರ್ಯದರ್ಶಿ ಪ್ರತಾಪಸಿಂಹ, ಪದಾಧಿಕಾರಿಗಳಾದ ಪ್ರಮುಖ್, ಅರ್ಪಿತಾ, ಪೃಥ್ವೀರಾಜ್, ಚೈತ್ರಾ, ಸುಷ್ಮಾ, ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು