ಮಧುಗಿರಿ: ತಾಲ್ಲೂಕಿನ ಕಾಟಗೊಂಡನಹಳ್ಳಿ ಬಳಿ ಭಾನುವಾರ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಬಾಲಕ ಸೇರಿ ಐವರು ಸಾವನ್ನಪ್ಪಿದ್ದಾರೆ.
ಪಾವಗಡ ತಾಲ್ಲೂಕಿನ ಎತ್ತಿನಹಳ್ಳಿ ಗ್ರಾಮದ ಜನಾರ್ದನ ರೆಡ್ಡಿ (62), ಅವರ ಮಗಳು ಸಿಂಧುಜಾ (34), ಮೊಮ್ಮಗ ವೇದಾಸ್ ರೆಡ್ಡಿ (8), ಮಧುಗಿರಿ ತಾಲ್ಲೂಕು ಮಿಡಿಗೇಶಿ ಹೋಬಳಿಯ ಕಾರೇನಹಳ್ಳಿ ಗ್ರಾಮದ ನಾಗರಾಜು (34), ಸಿದ್ಧಗಂಗಪ್ಪ (35) ಮೃತರು.
ಎತ್ತಿನಹಳ್ಳಿ ಗ್ರಾಮದ ಗೀತಾ (29), ಪುತ್ರ ಯೋದಾಕಿರಣ್ (14), ಚಾಲಕ ಆನಂದ್ (30), ಮೃತ ಸಿಂಧೂಜಾ ಪುತ್ರ ಟ್ರಯಾಗಸ್ ದೇವ್ ರೆಡ್ಡಿ (14 ತಿಂಗಳು) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜನಾರ್ದನ ರೆಡ್ಡಿ ಸೇರಿದಂತೆ ಏಳು ಜನ ಕಾರಿನಲ್ಲಿ ಎತ್ತಿನಹಳ್ಳಿ ಗ್ರಾಮದಿಂದ ಬೆಂಗಳೂರಿಗೆ ತೆರಳುತ್ತಿದ್ದರು. ನಾಗರಾಜು, ಸಿದ್ಧಗಂಗಪ್ಪ ಬೆಂಗಳೂರಿನಿಂದ ಮಧುಗಿರಿ ಮಾರ್ಗವಾಗಿ ಕಾರೇನಹಳ್ಳಿಗೆ ತೆರಳುತ್ತಿದ್ದರು.