ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಟ್‌ ಟೈಮ್‌ ಕೆಲಸದ ಹೆಸರಿನಲ್ಲಿ ಪ್ರಾಧ್ಯಾಪಕಿಗೆ ₹3 ಲಕ್ಷ ವಂಚನೆ

Published 23 ಏಪ್ರಿಲ್ 2024, 14:34 IST
Last Updated 23 ಏಪ್ರಿಲ್ 2024, 14:34 IST
ಅಕ್ಷರ ಗಾತ್ರ

ತುಮಕೂರು: ಪಾರ್ಟ್‌ ಟೈಮ್‌ ಕೆಲಸದ ಹೆಸರಿನಲ್ಲಿ ಪ್ರಾಧ್ಯಾಪಕಿಯೊಬ್ಬರಿಗೆ ₹2.99 ಲಕ್ಷ ವಂಚಿಸಿದ್ದು, ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುವೆಂಪು ನಗರದ ನಿವಾಸಿ ಸಹನಾ ಪ್ರಕಾಶ್‌ ಎಂಬುವರು ಆನ್‌ಲೈನ್‌ ಮೂಲಕ ಪಾರ್ಟ್‌ ಟೈಮ್‌ ಕೆಲಸ ಮಾಡುತ್ತಾ, ಹಣ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ಹಣ ಕಳೆದುಕೊಂಡಿದ್ದಾರೆ. ವಾಟ್ಸ್‌ ಆ್ಯಪ್‌ ಮೂಲಕ ಪರಿಚಯಿಸಿಕೊಂಡ ಆರೋಪಿಗಳು ಕ್ವಿಕ್ಸ್ಟಾ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಮೆಸೇಜ್‌ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ನಂತರ ಗೂಗಲ್‌ ಮ್ಯಾಪ್‌ ರಿವೀವ್‌ ಮಾಡುವ ಟಾಸ್ಕ್‌ಗಳನ್ನು ನೀಡಿದ್ದಾರೆ. ರಿವೀವ್‌ ಮಾಡಿದರೆ ಕಮಿಷನ್‌ ನೀಡುವುದಾಗಿ ತಿಳಿಸಿದ್ದಾರೆ. ಟಾಸ್ಕ್‌ ಪೂರ್ಣಗೊಳಿಸಿದ ನಂತರ ಸಹನಾ ಅವರ ಖಾತೆಗೆ ₹210 ಕಮಿಷನ್‌ ಹಾಕಿದ್ದಾರೆ. ಇದಾದ ಮೇಲೆ ಟೆಲಿಗ್ರಾಂ ಮುಖಾಂತರ ಮೆಸೇಜ್‌ ಮಾಡಿ ಟಾಸ್ಕ್‌ಗಳಿಗೆ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭಗಳಿಸಬಹುದು ಎಂದು ಹೇಳಿ ಲಿಂಕ್‌ ಕಳುಹಿಸಿದ್ದಾರೆ.

ಇದನ್ನು ನಂಬಿದ ಸಹನಾ ಅವರು ಸೈಬರ್‌ ವಂಚಕರು ಹೇಳಿದ ವಿವಿಧ ಖಾತೆಗಳು, ಯುಪಿಐ ಐ.ಡಿಗಳಿಗೆ ಹಂತ ಹಂತವಾಗಿ ₹3,05,000 ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಕಮಿಷನ್‌ ಎಂದು ₹5,670 ಹಣ ವಾಪಸ್‌ ಹಾಕಿದ್ದಾರೆ. ಕೊನೆಗೆ ಹಣ ಬಾರದಿದ್ದಾಗ ಮೋಸ ಹೋಗಿರುವುದು ಗೊತ್ತಾಗಿದೆ. ‘ಮೋಸ ಮಾಡಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳುವಂತೆ’ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT