ಭಾನುವಾರ, ಜೂನ್ 26, 2022
22 °C
ಮೂರು ವರ್ಷದಲ್ಲಿ ಶೇ 100ರಷ್ಟು ಅನುದಾನ ಬಳಕೆ

ಮೂಲ ಸೌಕರ್ಯಗಳಿಗೆ ಆದ್ಯತೆ: ರಸ್ತೆ ಅಭಿವೃದ್ಧಿಗೆ ಸಿಂಹಪಾಲು

ಆರ್.ಸಿ.ಮಹೇಶ್ Updated:

ಅಕ್ಷರ ಗಾತ್ರ : | |

Prajavani

ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನ ಹಳ್ಳಿ ಕ್ಷೇತ್ರದ ಶಾಸಕ ಜೆ.ಸಿ.ಮಾಧುಸ್ವಾಮಿ ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಅದರಲ್ಲಿ ಸಿಂಹಪಾಲನ್ನು ರಸ್ತೆ ಅಭಿವೃದ್ಧಿಗೆ ಬಳಸಿದ್ದಾರೆ.

ಗ್ರಾಮೀಣ ಭಾಗದ ರಸ್ತೆ, ಅಂಗನವಾಡಿ ಕೇಂದ್ರ, ಶಾಲಾ ಕಟ್ಟಡಗಳ ದುರಸ್ತಿ, ದೇಗುಲಗಳ ಅಭಿವೃದ್ಧಿ ಸೇರಿದಂತೆ ಸಮುದಾಯ ಭವನಗಳ ನಿರ್ಮಾಣಕ್ಕೆ ವ್ಯಯಿಸಿದ್ದಾರೆ. ಮೂರು ವರ್ಷದ ಅನುದಾನವನ್ನು ಶೇ 100ರಷ್ಟು ಬಳಕೆ ಮಾಡಿಕೊಂಡಿದ್ದಾರೆ.

2018ರಲ್ಲಿ ಮಂಜೂರಾದ ₹1 ಕೋಟಿ ಅನುದಾನವನ್ನು ಕೇತ್ರದ ಕೆಲ ಹೋಬಳಿಗಳಿಗೆ ಹಂಚಿದ್ದಾರೆ. ಮಠ, ಸಮುದಾಯ ಭವನ, ಪ್ರಾರ್ಥನಾ ಮಂದಿರಕ್ಕೆ ಹಣ ಬಳಕೆಯಾಗಿದೆ. ಶಾಸಕರ ಸ್ವಗ್ರಾಮ ಜಯಚಾಮರಾಜ ಪುರದ ಶಾಲೆ ಕಟ್ಟಡ, ಅಕ್ಷರ ದಾಸೋಹ ಮನೆ ದುರಸ್ತಿಗೆ ₹8 ಲಕ್ಷ ನೀಡಿದ್ದಾರೆ. ಲಕ್ಷ್ಮೀನರಸಿಂಹಸ್ವಾಮಿ ದೇಗುಲ ಹಾಗೂ ಕಲ್ಯಾಣಿ ನಿರ್ಮಾಣಕ್ಕೆ ₹5 ಲಕ್ಷ ನೀಡಿದ್ದಾರೆ. ತಿಮ್ಮನಹಳ್ಳಿಯಲ್ಲಿ ಚರ್ಚ್‌ ಅಭಿವೃದ್ಧಿಗೂ ಹಣ ನೀಡಿದ್ದಾರೆ. ಚಿಕ್ಕನಾಯಕನಹಳ್ಳಿ ಪಟ್ಟಣದ ಕ್ರೀಡಾಂ
ಗಣದಲ್ಲಿ ಜಿಮ್ನಾಸ್ಟಿಕ್‌ ನಿರ್ಮಾಣಕ್ಕೆ ಒಟ್ಟು ₹15 ಲಕ್ಷ ಬಳಕೆಯಾಗಿದೆ.

ದೊಡ್ಡಎಣ್ಣೇಗೆರೆ ಗ್ರಾಮ ಪಂಚಾಯಿತಿಯ ಬೊಮ್ಮೇನಹಳ್ಳಿ, ಗ್ಯಾರೇಹಳ್ಳಿ ಪಾಳ್ಯ, ಬೈರಲಿಂಗನಪಾಳ್ಯ ಬರಸಿಡ್ಲಹಳ್ಳಿ, ದುಗಡಿಹಳ್ಳಿ, ಹೊಯ್ಸಳಕಟ್ಟೆ, ಗೌಡಗೆರೆ, ದಬ್ಬಗುಂಟೆ, ಸಾಲ್ಕಟ್ಟೆ, ತಿಮ್ಮನಹಳ್ಳಿ, ಹಂದಿಗನಡು ಗ್ರಾಮಗಳ ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಳಕೆಯಾಗಿದೆ.

ಗೋಪಾಲನ ಹಳ್ಳಿ, ತಿಮ್ಮನಹಳ್ಳಿ, ಕೆಂಕೆರೆ, ಬಡಕೆಗುಡ್ಲು, ಮಾಳಿಗೆಹಳ್ಳಿ, ತಿಗಳನಪಾಳ್ಯ, ಹರೇನಹಳ್ಳಿ, ಬೊಮ್ಮೇನಹಳ್ಳಿ, ಸಾಲುದೇವರಹಳ್ಳಿ, ಕೊಡ್ಲಾಗಾರ, ಮಲಗೊಂಡನಹಳ್ಳಿ, ಜಯಚಾಮರಾಜಪುರ, ಪಂಕಜನಹಳ್ಳಿ ಕಾನ್ಕೆರೆ ಗ್ರಾಮಗಳಲ್ಲಿ ಸಿ.ಸಿ ರಸ್ತೆ ನಿರ್ಮಾಣಕ್ಕೆ ತಲಾ ₹10 ಲಕ್ಷ ವಿನಿಯೋಗಿಸಲಾಗಿದೆ. ಸಿಸಿ ರಸ್ತೆಗಳ ಜತೆ ಹಾಲುಗೋಣ, ಶೆಟ್ಟಿಕೆರೆ ಡಾಂಬರು ರಸ್ತೆ, ಹೊನ್ನಶೆಟ್ಟಿಹಳ್ಳಿ ಸೇರಿದಂತೆ ಕೆಲ ಗ್ರಾಮಗಳಿಗೆ ಸಂಪರ್ಕ ಮಾಡುವ ಜಲ್ಲಿ ರಸ್ತೆಯನ್ನು ಶಾಸಕರ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಕೆಂಕೆರೆ ಹೊನ್ನಯ್ಯನಪಾಳ್ಯ ಗ್ರಾಮದ ರಸ್ತೆ ನಿರ್ಮಾಣಕ್ಕೆ ₹20 ಲಕ್ಷ ನೀಡಿದ್ದಾರೆ.

ಜಯಚಾಮರಾಜಪುರ ಸರ್ಕಾರಿ ಪ್ರೌಢಶಾಲಾ ಕಟ್ಟಡ, ಬರಕನಹಾಳ್‌, ಕಸಬಾ ಹೋಬಳಿ ಕಾರೇಹಳ್ಳಿ, ಎಳ್ಳೇನಹಳ್ಳಿ, ದಸೂಡಿ ಮರಾಠಿಪಾಳ್ಯ, ಕಾತ್ರಿಕೆಹಾಳ್‌, ಜಾಣೇಹಾರ್‌, ಮಾರುಹೊಳೆ ಶಾಲಾ ಕಾಂಪೌಂಡ್‌, ಗ್ರಾಮಗಳ ಕಟ್ಟಡಗಳ ದುರಸ್ತಿಗೆ ಅನುದಾನ ಬಳಕೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು