ಗುಬ್ಬಿ: ತಾಲ್ಲೂಕಿನಲ್ಲಿ ಶುಕ್ರವಾರ ಸಂಜೆ ಮಳೆ, ಗಾಳಿಗೆ ತಾಲ್ಲೂಕಿನ ಹಲವೆಡೆ ತೆಂಗು, ಅಡಿಕೆ ಹಾಗೂ ರಸ್ತೆ ಬದಿಯ ಮರಗಳು ಮುರಿದುಬಿದ್ದಿವೆ.

ಪಟ್ಟಣದ ಬಿದ್ದಾಂಜನೇಯ ದೇವಾಲಯದ ಸಮೀಪ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಮರವೊಂದು ಮಳೆ ಗಾಳಿಗೆ ಮುರಿದು ಬಿದ್ದಿದ್ದರೂ ಬೆಸ್ಕಾಂ ಇಲಾಖೆ ಗಮನಹರಿಸದೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು.

ಇದರಿಂದಾಗಿ ಹಲವೆಡೆ ವಿದ್ಯುತ್ ಇಲ್ಲವಾಗಿ ಕುಡಿಯುವ ನೀರಿಗೂ ತೊಂದರೆ ಅನುಭವಿಸುವಂತಾಗಿತ್ತು. ಹೆದ್ದಾರಿಗೆ ಹೊಂದಿಕೊಂಡಂತೆ ಇರುವುದರಿಂದ ಸಾಕಷ್ಟು ಅನಾಹುತ ಆಗುವ ಸಂಭವವಿದೆ. ಆದರೂ ಅಧಿಕಾರಿಗಳು ಮುರಿದು ಬಿದ್ದಿರುವ ಮರವನ್ನು ಏಕೆ ತೆರವುಗೊಳಿಸಿಲ್ಲ ಎನ್ನುವುದು ತಿಳಿಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಮತ್ತು ಬೆಸ್ಕಾಂ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಒಣಗಿರುವ ಹಾಗೂ ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಬೇಕು. ಆದರೂ ಎರಡೂ ಇಲಾಖೆಯವರು ಒಬ್ಬರ ಮೇಲೊಬ್ಬರು ಬೆರಳು ತೋರುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ರೈತ ಸಂಘದ ಕಾರ್ಯದರ್ಶಿ ಲೋಕೇಶ್.

ಪೂರ್ವ ಮುಂಗಾರು ಮಾರುತ ಪ್ರಾರಂಭವಾಗುತ್ತಿರುವುದರಿಂದ ಅಧಿಕಾರಿಗಳು ಎಚ್ಚೆತ್ತುಕೊಂಡು ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಬೇಕು. ಮರ ಬಿದ್ದ ತಕ್ಷಣ ತೆರವುಗೊಳಿಸಲು ಮುಂದಾಗಬೇಕಿದೆ. ಅನಾಹುತ ಸಂಭವಿಸಿದಾಗ ಓಡಿಬರುವ ಅಧಿಕಾರಿಗಳು ಅನಾಹುತವಾಗದಂತೆ ತಡೆಯುವ ಮುನ್ನೆಚ್ಚರಿಕೆ ವಹಿಸಬೇಕು ಎನ್ನುತ್ತಾರೆ ವಕೀಲ ಶಶಿಧರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.