ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊರಟಗೆರೆ: ಇಳೆ ತಂಪಾಗಿಸಿದ ರೋಹಿಣಿ ಮಳೆ

Published 8 ಜೂನ್ 2024, 7:47 IST
Last Updated 8 ಜೂನ್ 2024, 7:47 IST
ಅಕ್ಷರ ಗಾತ್ರ

ಕೊರಟಗೆರೆ: ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಪಟ್ಟಣಕ್ಕೆ ನೀರುಣಿಸುವ ಜಂಪೇನಹಳ್ಳಿ ಕೆರೆ ಒಂದೇ ರಾತ್ರಿಯಲ್ಲಿ ತುಂಬಿ ಕೋಡಿ ಹರಿಯಿತು.

ಕಳೆದ ವರ್ಷ ಮಳೆ ಇಲ್ಲದೆ ಕಂಗಾಲಾಗಿದ್ದ ರೈತರಿಗೆ ಕಳೆದ ರಾತ್ರಿ ಸುರಿದ ಮಳೆ  ಚೈತನ್ಯ ತುಂಬಿದ್ದು, ನೀರಿಲ್ಲದೆ ಒಣಗಿದ್ದ ತಾಲ್ಲೂಕಿನ ಸಣ್ಣ ಪುಟ್ಟ ಕೆರೆಗಳು ಸೇರಿದಂತೆ ಜಂಪೇನಹಳ್ಳಿ ಕೆರೆ ಒಂದೇ ರಾತ್ರಿಯಲ್ಲಿ ನೀರಿನಿಂದ ಮೈದುಂಬಿವೆ. ಕಳೆದ ವರ್ಷ ಮಳೆಗಾಲದ ಆರಂಭದಿಂದಲೂ ಸಣ್ಣ ಕಟ್ಟೆ ತುಂಬುವಷ್ಟು ಕೂಡ ಮಳೆಯಾಗಿರಲಿಲ್ಲ.

ಜೂನ್ 7ರಿಂದ ಮೃಗಶಿರ ಮಳೆ ಆರಂಭದ ದಿನ ಉತ್ತಮ ಮಳೆ ಬಂದ ಕಾರಣ ಈ ವರ್ಷ ಉತ್ತಮ ಮಳೆಯಾಗಬಹುದು. ಇದರಿಂದ ಬೆಳೆ ಚೆನ್ನಾಗಿ ಬರಬಹುದು ಎಂಬ ನಿರೀಕ್ಷೆಯಲ್ಲಿ ತಾಲ್ಲೂಕಿನ ರೈತರದ್ದಾಗಿದೆ.

ತಾಲ್ಲೂಕಿನ ಬುಕ್ಕಪಟ್ಟಣ ಹೊಸಕೆರೆ, ಹಳೆಕೆರೆ ಕೂಡ ಕೋಡಿ ಹರಿದ ಕಾರಣ ಜಂಪೇನಹಳ್ಳಿ ಕೆರೆ ತುಂಬಿದೆ.

ಕೆರೆ ಕೋಡಿ ಹರಿಯುವುದನ್ನು ಬೆಳಗ್ಗೆಯಿಂದಲೇ ಜನರು ಗುಂಪು ಗುಂಪಾಗಿ ಬಂದು ಸಂತಸಪಟ್ಟರು. ಯುವಕರು, ಮಕ್ಕಳು, ಮಹಿಳೆಯರು ನೀರಿನಲ್ಲಿ ಆಡಿ ಖುಷಿಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT