ಗುರುವಾರ , ಅಕ್ಟೋಬರ್ 17, 2019
26 °C

ಪರಮೇಶ್ವರ ಆಪ್ತ ಆತ್ಮಹತ್ಯೆ: ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಬಿಗಿ ಭದ್ರತೆ

Published:
Updated:

ತುಮಕೂರು: ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಐಟಿ ಅಧಿಕಾರಿಗಳ ತಂಡ ದಾಖಲಾತಿ ಪರಿಶೀಲನೆ ಮುಂದುವರಿಸಿದ್ದು, ಡಾ.ಪರಮೇಶ್ವರ ಆಪ್ತ ರಮೇಶ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಐಟಿ ಅಧಿಕಾರಿಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಬೆಳಿಗ್ಗೆಯಿಂದ ಪೊಲೀಸ್ ಸಿಬ್ಬಂದಿ ಮಾತ್ರ ಭದ್ರತೆಗೆ ನಿಯೋಜಿಸಲಾಗಿತ್ತು. ಮಧ್ಯಾಹ್ನ  1.30 ರ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅವರು ಹೆಚ್ಚಿನ ಭದ್ರತೆಗೆ ಸಬ್ ಇನ್ ಸ್ಪೆಕ್ಟರ್  ವಿಜಯಲಕ್ಷ್ಮಿ, ಇನ್ಚಸ್ಪೆಕ್ಟರ್ ಮಧುಸೂದನ್ ಅವರನ್ನು ನಿಯೋಜಿಸಿದ್ದಾರೆ. ಮೀಸಲು ಪಡೆ ಪೊಲೀಸ್ ಸಿಬ್ಬಂದಿಯನ್ನೂ ಕಾಲೇಜಿನ ಆವರಣದಲ್ಲಿ ನಿಯೋಜಿಸಲಾಗಿದೆ.

ಎಎಸ್ಪಿ ಉದೇಶ್ ಅವರು ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದರು.

Post Comments (+)