ಇತ್ತೀಚಿನ ಅಂಕಿ–ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 2,563 ಲೈಂಗಿಕ ಕಾರ್ಯಕರ್ತೆಯರು, 1,982 ಲಿಂಗತ್ವ ಅಲ್ಪ ಸಂಖ್ಯಾತರು, 124 ತೃತೀಯ ಲಿಂಗಿಗಳು ಎನ್‌ಜಿಒ ಅಡಿ ನೋಂದಣಿಯಾಗಿದ್ದಾರೆ. ಇದರಲ್ಲಿ ಶೇ 1.48ರಷ್ಟು ಲೈಂಗಿಕ ಕಾರ್ಯಕರ್ತೆಯರು, ಶೇ 1.96ರಷ್ಟು ಲಿಂಗತ್ವ ಅಲ್ಪ ಸಂಖ್ಯಾತರು ಮತ್ತು ಶೇ 3.23ರಷ್ಟು ತೃತೀಯ ಲಿಂಗಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಎಲ್ಲ ಸೋಂಕಿತರನ್ನು ಎಆರ್‌ಟಿ ಕೇಂದ್ರದಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.