ಇಂದಿನಿಂದ ರೈತರು ವ್ಯಾಪಾರಿಗಳು ಯಾವುದೇ ಕಾರಣಕ್ಕೂ ಸುಂಕ ಪಾವತಿಸಬಾರದು. ಮಾರಾಟಗಾರರೇ ತಮ್ಮ ಸ್ಥಳವನ್ನು ಸ್ವಚ್ಛ ಮಾಡಿಕೊಂಡು ನಿಗದಿಪಡಿಸಿದ ಸಮಯಕ್ಕೆ ಮಾರುಕಟ್ಟೆಯನ್ನು ಖಾಲಿ ಮಾಡಬೇಕು. ಅಕ್ಟೋಬರ್ 4ರಿಂದ ರೈತ ಸಂಘವೇ ಮಾರುಕಟ್ಟೆ ವ್ಯವಸ್ಥೆಯನ್ನು ನಿರ್ವಹಿಸುತ್ತದೆ ಎಂದು ರೈತ ಸಂಘ ನಿರ್ಧಾರ ಪ್ರಕಟಿಸಿತು. ಈ ನಿರ್ಧಾರಕ್ಕೆ ಸ್ಥಳದಲ್ಲಿದ್ದ ನೂರಾರು ರೈತರು ಹಾಗೂ ವ್ಯಾಪಾರಿಗಳು ಜೈಕಾರ ಹಾಕಿ ಬೆಂಬಲ ಸೂಚಿಸಿದರು.