ಮಧುಗಿರಿ: ಅಕ್ರಮವಾಗಿ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ 27 ಹಸುಗಳನ್ನು ಮಿಡಿಗೇಶಿ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.

ಮಿಡಿಗೇಶಿ ಹೋಬಳಿಯ ಆಂಧ್ರದ ಗಡಿ ಭಾಗದ ಚಂದ್ರಬಾವಿ ಚೆಕ್ಪೋಸ್ಟ್ ಬಳಿ ಬಳ್ಳಾರಿಯಿಂದ ಮಧುಗಿರಿ ಕಡೆಗೆ ಬರುತ್ತಿದ್ದ ಲಾರಿಯನ್ನು ಪೊಲೀಸರು ತಡೆದು ಪರಿಶೀಲಿಸಿದಾಗ ಅವರ ಬಳಿ ದಾಖಲೆ, ಅನುಮತಿಯಿಲ್ಲದೆ ಎಮ್ಮೆ, ಕೋಣ, ಹೋರಿ ಮತ್ತು ಹಸುಗಳನ್ನು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ವಶಕ್ಕೆ ಪಡೆದ ಹಸುಗಳನ್ನು ಕ್ಯಾತ್ಸಂದ್ರದ ಗೋಶಾಲೆಗೆ ಕಳುಹಿಸಿಕೊಡಲಾಗಿದೆ ಎಂದು ಪಿಎಸ್ಐ ರವೀಂದ್ರ ತಿಳಿಸಿದ್ದಾರೆ.

ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಂಧಿತರು ದಾವಣಗೆರೆ, ಬಳ್ಳಾರಿ ಹಾಗೂ ಚಿತ್ರದುರ್ಗದ ಭಾಗಗಳಿಂದ ಬರುತ್ತಿದ್ದೇವೆಂದು ಪ್ರಾಥಮಿಕ ವಿಚಾರಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಲಾರಿ ಚಾಲಕ ಚೇತನ್, ಕ್ಲೀನರ್ ರಘು, ತಬರೀಸ್ ವಿರುದ್ಧ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.