ತುರುವೇಕೆರೆ: ತುಮಕೂರು ಜಿಲ್ಲೆಯಲ್ಲೇ ಸುಮಾರು 2 ಲಕ್ಷ ರಾಸುಗಳಿಗೆ ವಿಮೆ ಸೌಲಭ್ಯವನ್ನು ಕಲ್ಪಿಸಲಾಗಿದ್ದು ಇದರಿಂದ ಹೈನುಗಾರರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಜಿಲ್ಲಾ ಹಾಲು ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಹೇಳಿದರು.
ತಾಲ್ಲೂಕಿನ ಮಾದಿಹಳ್ಳಿಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮುಂಭಾಗ ಹಮ್ಮಿಕೊಂಡಿದ್ದ ರಾಸುಗಳಿಗೆ ವಿಮೆ ಮಾಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಸುಗಳ ವಿಮೆ ಮಾಡಿಸುವ ಸಲುವಾಗಿ ಹಾಲು ಒಕ್ಕೂಟದಿಂದ ಸುಮಾರು ₹24 ಕೋಟಿ ಮೀಸಲಿರಿಸಲಾಗಿದೆ. ಪ್ರತಿ ರಾಸುವಿಗೆ ಕನಿಷ್ಠ ₹10 ಸಾವಿರದಿಂದ ₹60 ಸಾವಿರ ವಿಮೆ ಮಾಡಿಸಲಾಗುತ್ತಿದೆ. ಸರಾಸರಿ ₹40 ಸಾವಿರ ವಿಮೆ ಸೌಲಭ್ಯವಿದೆ ಎಂದರು.
ತಾಲ್ಲೂಕಿನಲ್ಲಿ ಕಳೆದ ಬಾರಿ 13 ಸಾವಿರ ರಾಸುಗಳಿಗೆ ವಿಮೆ ಮಾಡಿಸಲಾಗಿತ್ತು. ಆದರೆ ಈ ಬಾರಿ 20 ಸಾವಿರ ರಾಸುಗಳಿಗೆ ವಿಮೆ ಮಾಡಿಸುವ ಗುರಿ ಹೊಂದಲಾಗಿದೆ. ವಿಮೆ ಹಣವನ್ನು ರೈತರಿಗೆ ಸಂಸ್ಥೆಯಿಂದಲೇ ಮಾಡಿಸಲಾಗುವುದು. ಸರಾಸರಿ ಪ್ರತಿ ರಾಸುವಿಗೆ ₹1,800 ವಿಮೆ ಹಣ ಕಟ್ಟಬೇಕಾಗುತ್ತದೆ. ಆ ಎಲ್ಲಾ ಹಣವನ್ನು ಹಾಲಿನ ಒಕ್ಕೂಟ, ಟ್ರಸ್ಟ್ ಮತ್ತು ಹಾಲು ಸಹಕಾರ ಸಂಘದ ಮೂಲಕ ಕಟ್ಟಲಾಗುವುದು ಎಂದರು.
ವಿಸ್ತರಣಾಧಿಕಾರಿ ಮಂಜುನಾಥ್, ದಿವಾಕರ್, ಶೋಭಾ, ಗೌರಮ್ಮ, ಸುಶೀಲಮ್ಮ, ನೀಲಮ್ಮ, ಕವಿತಾ, ಮಹಾಲಕ್ಷ್ಮಮ್ಮ, ಕೆಂಪದೇವಮ್ಮ, ಕಲಾವತಿ, ರೂಪಶ್ರೀ, ರತ್ನಮ್ಮ, ಜ್ಯೋತಿ, ಕುಮಾರ್, ವಿಶಾಲಾಕ್ಷಿ, ನರೇಂದ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.