ಗುರುವಾರ , ಫೆಬ್ರವರಿ 25, 2021
26 °C

ಎಲ್‌ಕೆಜಿ ಮಗುವಿಗೆ ಪಾಠ ಕಲಿಸಿಲ್ಲವೆಂದು ಶಿಕ್ಷಕಿ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್: ‘ಎಲ್‌ಕೆಜಿ ಮಗುವಿಗೆ ಏನೂ ಕಲಿಸಿಲ್ಲ’ ಎಂದು ಆರೋಪಿಸಿದ ಪೋಷಕರು ಅಂಕನಹಳ್ಳಿ ಮಠದ ಪಿರಂಗಿಸ್ವಾಮಿ ಇಂಟರ್ ನ್ಯಾಷನಲ್ ಶಾಲೆಯ ಶಿಕ್ಷಕಿ ನಾಗಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ.

‘ನಾನು ಶಾಲೆಯ ಕಚೇರಿಯಲ್ಲಿ ಇದ್ದಾಗ ವಿದ್ಯಾರ್ಥಿ ನಿಶ್ಚಯ್ ಪೋಷಕರಾದ ಪ್ರವೀಣ್ ಮತ್ತು ಚೈತ್ರಾ ಬಂದು ನಮ್ಮ ಮಗನಿಗೆ ನೀವು ಏನನ್ನೂ ಕಲಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಾಗ್ವಾದ ನಡೆಸಿ ಹಲ್ಲೆಗೆ ಯತ್ನಿಸಿದರು.

‘ನಂತರ ಮತ್ತೆ ಈ ಇಬ್ಬರು ಮತ್ತು ಚೈತ್ರಾ ಅವರ ತಂದೆ ನಿತ್ಯಾನಂದಮೂರ್ತಿ ಬಂದು ರಕ್ತ ಬರುವಂತೆ ಹಲ್ಲೆ ನಡೆಸಿದರು. ಪ್ರಾಣ ಬೆದರಿಕೆ ಹಾಕಿದರು’ ಎಂದು ಹುಲಿಯೂರುದುರ್ಗ ಠಾಣೆಯಲ್ಲಿ ನಾಗಮ್ಮ ದೂರು ದಾಖಲಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು