ತುಮಕೂರು: ರಾಜ್ಯ ಶಿಕ್ಷಣ ನೀತಿ ಆಯೋಗವು ಶಾಲಾ ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಅನುಷ್ಠಾನಕ್ಕೆ ಶಿಫಾರಸು ಮಾಡಿದ್ದು, ಇದರಲ್ಲಿ ಕನ್ನಡ ಕಡ್ಡಾಯವೇ ಅಥವಾ ಐಚ್ಛಿಕವೇ? ಎಂಬುವುದನ್ನು ಸ್ಪಷ್ಟಪಡಿಸಬೇಕು ಎಂದು ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ಚಿಂತಕರು ಒತ್ತಾಯಿಸಿದ್ದಾರೆ.

ನಗರದಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ರಾಜ್ಯ ನೂತನ ಶಿಕ್ಷಣ ನೀತಿ (ಎಸ್ಇಪಿ), ಪ್ರೊ.ಸುಖದೇವ್ ಥೋರಟ್ ವರದಿ ಕುರಿತ ಚರ್ಚೆಯಲ್ಲಿ ಹಲವು ಅಭಿಪ್ರಾಯ, ಒತ್ತಾಯಗಳು ಕೇಳಿ ಬಂದವು.

‘ಆಯೋಗ ರಾಜ್ಯದಲ್ಲಿ ದ್ವಿಭಾಷಾ ನೀತಿ ಅನುಷ್ಠಾನಕ್ಕೆ ಶಿಫಾರಸು ಮಾಡಿದೆ. ಶಿಫಾರಸಿನ ಪಟ್ಟಿಯಲ್ಲಿ ಕನ್ನಡ ಅಥವಾ ಮಾತೃಭಾಷೆ ಮತ್ತು ಇಂಗ್ಲಿಷ್ ಎಂದು ಉಲ್ಲೇಖಿಸಲಾಗಿದೆ. ಇದು ಬಹಳ ದೊಡ್ಡ ಗೊಂದಲಕ್ಕೆ ಕಾರಣವಾಗಿದೆ. ಕನ್ನಡ ಅಥವಾ ಮಾತೃಭಾಷೆ ಎಂದಾಗ ಕನ್ನಡದ ಬದಲಿಗೆ ಇತರೆ ಯಾವುದೇ ಭಾಷೆಯಲ್ಲಿ ಕಲಿಯುವ ಅವಕಾಶ ಸೃಷ್ಟಿಯಾಗುತ್ತದೆ. ಇಲ್ಲಿ ಕನ್ನಡ ಆಯ್ಕೆಯ ವಿಷಯವಾಗಿ ಉಳಿಯುತ್ತದೆ’ ಎಂದು ಲೇಖಕ ಕೆ.ಪಿ.ನಟರಾಜ್ ಪ್ರತಿಪಾದಿಸಿದರು.

ಆ. 8ರಂದು ಪ್ರೊ.ಸುಖದೇವ್ ಥೋರಟ್ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ವರದಿಯಲ್ಲಿ ಶಾಲಾ ಮತ್ತು ಉನ್ನತ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಟ್ಟು ಐದು ಸಂಪುಟಗಳಿವೆ. ವರದಿಯ 97 ಶಿಫಾರಸುಗಳು ಮಾತ್ರ ಈಗ ಲಭ್ಯವಾಗಿವೆ. ಒಂದು ತಾತ್ವಿಕತೆ, ಸಂಪೂರ್ಣ ವಿವರ ಸಿಕ್ಕಿಲ್ಲ ಎಂದು ಹೇಳಿದರು.

ಈವರೆಗಿನ ಎಲ್ಲ ಶಿಕ್ಷಣ ನೀತಿಗಳು ತ್ರಿಭಾಷಾ ಸೂತ್ರ ಎತ್ತಿ ಹಿಡಿದಿದ್ದವು. ಸರ್ಕಾರ ಒಂದು ಐತಿಹಾಸಿಕ ನಿರ್ಧಾರ ಕೈಗೊಂಡು, ದ್ವಿಭಾಷಾ ಸೂತ್ರ ಅನುಷ್ಠಾನಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಮಾತೃ ಭಾಷೆಯ ಗೊಂದಲದ ಕುರಿತು ಆಯೋಗ ರಾಜ್ಯದ ಜನರಿಗೆ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು.

ಗುರುಬಸವ ವಿದ್ಯಾಸಂಸ್ಥೆಯ ಚಂದ್ರಶೇಖರ್, ‘ರಾಜ್ಯದಲ್ಲಿ ಕನ್ನಡ ಭಾಷೆ ಕಡ್ಡಾಯವಾಗಬೇಕು. ಇದರ ಜತೆಗೆ ಮಕ್ಕಳ ಭವಿಷ್ಯ, ಉದ್ಯೋಗದ ಬಗ್ಗೆಯೂ ಗಮನ ಹರಿಸಬೇಕು. ಈಗ ಉಂಟಾಗಿರುವ ಗೊಂದಲಗಳಿಗೆ ಆಯೋಗ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು.

ಚಿಂತಕ ಕೆ.ದೊರೈರಾಜ್, ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್, ಇತಿಹಾಸಕಾರ ಪ್ರೊ.ಡಿ.ಎನ್.ಯೋಗೀಶ್ವರಪ್ಪ, ನಿವೃತ್ತ ಪ್ರಾಂಶುಪಾಲರಾದ ಟಿ.ಆರ್.ಲೀಲಾವತಿ, ಪ್ರಾಧ್ಯಾಪಕ ಬಿ.ಆರ್.ರೇಣುಕಪ್ರಸಾದ್, ನಿವೃತ್ತ ಉಪನಿರ್ದೇಶಕ ಟಿ.ಎಸ್.ಆಂಜನಪ್ಪ ಇತರರು ಹಾಜರಿದ್ದರು.

ದ್ವಿಭಾಷಾ ತ್ರಿಭಾಷಾ ಸೂತ್ರದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ರಾಜ್ಯದಲ್ಲಿ ಕನ್ನಡ ಭಾಷೆ ಕಡ್ಡಾಯವಾಗಬೇಕು ಭಾಷೆಗೆ ಕುತ್ತು ಬರಬಾರದು
ಕೆ.ಎಸ್.ಸಿದ್ಧಲಿಂಗಪ್ಪ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್

ಇಂಗ್ಲಿಷ್ ಹೇರಿಕೆಯಿಂದ ಸರ್ಕಾರಿ ಕಾಲೇಜಿಗೆ ವಿದ್ಯಾರ್ಥಿಗಳು ಸೇರುತ್ತಿಲ್ಲ. ಕಾಲೇಜುಗಳು ಬಾಗಿಲು ಮುಚ್ಚುತ್ತಿವೆ. ದ್ವಿಭಾಷಾ ಸೂತ್ರಕ್ಕೆ ನಮ್ಮ ಬೆಂಬಲ
ಬಿ.ಕರಿಯಣ್ಣ ಪ್ರಾಧ್ಯಾಪಕ ವಿ.ವಿ ಕಲಾ ಕಾಲೇಜು

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬಹಳ ದೋಷಗಳಿದ್ದವು ವಿದ್ಯಾರ್ಥಿಗಳ ಕಲಿಕೆ ಅರ್ಧಂಬರ್ಧ ಆಗಿತ್ತು. ಹಲವು ಗೊಂದಲಗಳಿಗೆ ಕಾರಣವಾಗಿತ್ತು
ಮಲ್ಲಿಕಾ ಬಸವರಾಜು ಲೇಖಕಿ

ಅಪೂರ್ಣ ಶಿಕ್ಷಣ ನೀತಿ:

ಎಸ್ಎಸ್ಎಲ್ಸಿ ತನಕ ಕನ್ನಡ ಭಾಷೆಯಲ್ಲಿ ಓದಿದ ವಿದ್ಯಾರ್ಥಿಗಳು ಇಂಗ್ಲಿಷ್ನಲ್ಲಿ ಉನ್ನತ ಶಿಕ್ಷಣ ಮುಂದುವರಿಸಲು ಆಗುತ್ತಿಲ್ಲ. ಇದರಿಂದ ಪ್ರತಿ ವರ್ಷ 5 ಲಕ್ಷ ಮಕ್ಕಳು ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ. ಇಂತಹ ಜ್ವಲಂತ ಸಮಸ್ಯೆಗೆ ರಾಜ್ಯ ಶಿಕ್ಷಣ ನೀತಿ ಆಯೋಗದಿಂದ ಪರಿಹಾರ ಕಂಡುಕೊಳ್ಳಲು ಆಗಿಲ್ಲ. ನಿರೀಕ್ಷಿತ ಮಟ್ಟದಲ್ಲಿ ವರದಿ ಸಲ್ಲಿಕೆಯಾಗಿಲ್ಲ ಎಂದು ಲೇಖಕ ಕೆ.ಪಿ.ನಟರಾಜ್ ಹೇಳಿದರು. ಇಂಗ್ಲಿಷ್ ಮಾಧ್ಯಮದಿಂದ ಮಾತ್ರ ಉನ್ನತ ಶಿಕ್ಷಣ ಸಾಧ್ಯ ಎಂಬ ಪೂರ್ವಗ್ರಹದಿಂದ ಆಯೋಗ ಬಾಧಿಸಿಲ್ಪಟ್ಟಿರುವುದು ಸ್ಪಷ್ಟವಾಗಿದೆ. ಶೇ 65ರಷ್ಟು ಮಕ್ಕಳನ್ನು ಉನ್ನತ ಶಿಕ್ಷಣದಿಂದ ಹೊರಗೆ ನೂಕುತ್ತಿದ್ದೇವೆ. ಈ ಅಂಶ ಆಯೋಗದ ವರದಿಯಲ್ಲಿ ಪರಿಗಣನೆಗೆ ಬಂದಿಲ್ಲ. ತಾತ್ವಿಕವಾಗಿ ಪರಿಪೂರ್ಣವಾದ ಕನ್ನಡ ಪರ ನಿಲುವು ತಾಳಿಲ್ಲ ಎಂದರು. ವರದಿಯಲ್ಲಿ ಕನ್ನಡದ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಬೆಳಕು ಚೆಲ್ಲಿಲ್ಲ. ಈ ವಿಷಯ ನಿರ್ಲಕ್ಷಿಸಿದರೆ ಶೇ 65 ಮಕ್ಕಳನ್ನು ರಕ್ತ ಹೀನ ರೋಗಗ್ರಸ್ತಗೊಳಿಸಿ ಶಿಕ್ಷಣ ವ್ಯವಸ್ಥೆಯಿಂದ ದೂರ ಹಾಕಿದಂತೆ. ಅವರನ್ನು ಪಕ್ಕಕ್ಕಿಟ್ಟರೆ ಇದು ಅಪೂರ್ಣ ಶಿಕ್ಷಣ ನೀತಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.