ಬುಧವಾರ, ಡಿಸೆಂಬರ್ 2, 2020
17 °C

ಶಿರಾ: ಮಳೆಯಿಂದಾಗಿ ನೀರು ಪಾಲಾದ ಶೇಂಗಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ಎಪಿಎಂಸಿ ಮಾರುಕಟ್ಟೆಗೆ ತಂದಿದ್ದ ಶೇಂಗಾ ಮಂಗಳವಾರ ಬಂದ ಮಳೆಯಿಂದಾಗಿ ರಸ್ತೆಯಲ್ಲಿ ಕೊಚ್ಚಿ ಹೋಗುವಂತಾಯಿತು. ಅದನ್ನು ಉಳಿಸಿಕೊಳ್ಳಲು ರೈತರು ಸಂಕಷ್ಟಪಟ್ಟರು. ಸತತ ಬರಗಾಲದಿಂದ ಬೇಸತ್ತಿರುವ ಈ ಭಾಗದ ರೈತರಿಗೆ ಈ ಬಾರಿ ಶೇಂಗಾ ಉತ್ತಮ ಇಳುವರಿ ಬಂದಿದ್ದು ಹರ್ಷ ಮೂಡಿಸಿತ್ತು. ಮಂಗಳವಾರದ ಮಾರುಕಟ್ಟೆಗೆ ಹೆಚ್ಚಿನ ಶೇಂಗಾ ಬಂದಿದ್ದು ರಸ್ತೆಯಲ್ಲಿ ಶೇಂಗಾವನ್ನು ರಾಶಿ ಹಾಕಿ ಮಾರಾಟ ಮಾಡುತ್ತಿದ್ದಾಗ ಬಂದ ಮಳೆಯಿಂದಾಗಿ ಶೇಂಗಾ ಕೊಚ್ಚಿಕೊಂಡು ಹೋಗುವಂತಾಯಿತು. ಮಳೆಯನ್ನು ಲೆಕ್ಕಿಸದೆ ರೈತರು ಶೇಂಗಾ ರಕ್ಷಿಸಲು ಮುಂದಾದರೂ ಶೇಂಗಾ ನೀರಿನಲ್ಲಿ ತೇಲಿ ಹೋಗುತ್ತಿತ್ತು.

ಮಳೆಯಲ್ಲಿ ತೊಯ್ದ ಶೇಂಗಾ ಖರೀದಿಗೆ ವರ್ತಕರು ಹಿಂದೇಟು ಹಾಕಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು