ವಡ್ಡಗೆರೆಯಲ್ಲಿ ರಸ್ತೆ ಅಗೆದು ಪೈಪ್‌ಲೈನ್ ಬೇಕಾಬಿಟ್ಟಿಯಾಗಿ ಬಿಡಲಾಗಿದೆ
ಬಹುತೇಕ ಕಡೆಗಳಲ್ಲಿ ನೀರಿನ ಕೊಳಾಯಿಗೆ ಅಳವಡಿಸಲು ಬಳಸುತ್ತಿರುವ ಸಿಮೆಂಟ್ ದಿಂಡು
ನಲ್ಲಿ ಹಾಕಲು ನಮ್ಮ ಕೇರಿಯ ರಸ್ತೆಯನ್ನೇ ಹಾಳು ಮಾಡಿದ್ದಾರೆ. ಇದರಿಂದ ಮನೆ ಮುಂದೆ ಓಡಾಡುವುದು ಕಷ್ಟವಾಗಿದೆ. ರಸ್ತೆ ಹಾಳುಗೆಡವಿರುವ ಕಾರಣ ದ್ವಿಚಕ್ರ ವಾಹನ ನಮ್ಮ ಮನೆ ಮುಂದೆ ಬರದಂತಾಗಿದೆ.
ಚಿಕ್ಕಣ್ಣ ಗ್ರಾಮಸ್ಥ ಚಿಕ್ಕಪಾಳ್ಯ
ಯೋಜನೆ ಉದ್ದೇಶ ಚೆನ್ನಾಗಿದೆ. ಆದರೆ ಕೆಲವೆಡೆ ಬೇಕಾಬಿಟ್ಟಿ ಕಾಮಗಾರಿ ಮಾಡಿ ಮುಗಿಸಲಾಗಿದೆ. ಜೆಸಿಬಿ ಬಳಸುವುದರಿಂದ ರಸ್ತೆಗಳು ಹಾಳಾಗುತ್ತಿವೆ. ಇದೇ ಯೋಜನೆ ಮುಂದೊಂದು ದಿನ ಬಹುಕೋಟಿ ಹಗರಣವಾದರೂ ಆಶ್ಚರ್ಯ ಇಲ್ಲ ಎಂಬಂತೆ ಕಾಮಗಾರಿಗಳು ನಡೆಯುತ್ತಿವೆ.