ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ನಿಂಗಿಕೊಪ್ಪಲು ಅಂಚಿನಲ್ಲಿ ನಾಡಬಾಂಬ್ ಇಟ್ಟು ಹಂದಿ ಬೇಟೆಯಾಡಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ನಾಗಮಂಗಲದ ಶಂಕರ್ ನಾಗ್ ಮತ್ತು ಇಬ್ಬರು ಬಾಲಕರು ಬಂಧಿತರು.

ಸೋಮವಾರ ರಾತ್ರಿ ಅರಣ್ಯ ಪ್ರದೇಶದ ಅಂಚಿನಲ್ಲಿರುವ ನಿಂಗಿಕೊಪ್ಪಲು ಗ್ರಾಮದ ಬಳಿ ಸ್ಫೋಟದ ಸದ್ದು ಕೇಳಿದ ವಲಯ ಅರಣ್ಯಾಧಿಕಾರಿ ಜಗದೀಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ನೋಡಿದಾಗ ಕಾಡು ಹಂದಿ ಮೃತಪಟ್ಟಿರುವುದು ಕಂಡಿದೆ. ಭೇಟೆಯಾಡಿರುವ ಶಂಕೆಯಿಂದ ಆರೋಪಿಗಳ ಪತ್ತೆಗೆ ಕ್ಯಾಮೆರಾ ಅಳವಡಿಸಿ ಕಾದು ಕುಳಿತಿದ್ದರು.

ಮಂಗಳವಾರ ಬೆಳಗ್ಗೆ ಕಾಡು ಹಂದಿಯನ್ನು ತೆಗೆದುಕೊಂಡು ಹೋಗಲು ಬಂದ ಮೂವರನ್ನು ವಶಕ್ಕೆ ಪಡೆದು, ಹುಲಿಯೂರುದುರ್ಗ ಪೊಲೀಸರ ವಶಕ್ಕೆ ನೀಡಿ, ದೂರು ದಾಖಲಿಸಿದ್ದರು.

ಪೊಲೀಸರು ಬಾಂಬ್ ನಿಷ್ಕ್ರಿಯ ದಳದ ಜತೆ ತನಿಖೆ ನಡೆಸಿ, ಅರಣ್ಯ ಅಂಚಿನಲ್ಲಿ ಬೇಟೆಯಾಡಲು ಅಡಗಿಸಿಟ್ಟಿದ್ದ 25 ನಾಡಬಾಂಬ್ಗಳನ್ನು ಪತ್ತೆಹಚ್ಚಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.