ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್‌: ಮಾಂಸಕ್ಕಾಗಿ ಎಂಟು ಬಾವಲಿಗಳನ್ನು ಕೊಂದ ನಾಲ್ವರ ಬಂಧನ

Published 29 ಅಕ್ಟೋಬರ್ 2023, 7:32 IST
Last Updated 29 ಅಕ್ಟೋಬರ್ 2023, 7:32 IST
ಅಕ್ಷರ ಗಾತ್ರ

ಕುಣಿಗಲ್‌: ಮಾಂಸಕ್ಕಾಗಿ ಎಂಟು ಬಾವಲಿಗಳನ್ನು ಕೊಂದ ನಾಲ್ಕು ಜನ ಆರೋಪಿಗಳನ್ನು ವಲಯ ಅರಣ್ಯಾಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿಯ ಹೊಂಬಾಳಮ್ಮ ಪೇಟೆಯ ರಂಗನಾಥ, ರಾಮಕೃಷ್ಣ, ಶಿವಶಂಕರ, ರಂಗನಾಥ ಬಂಧಿತರು.

ತಾಲ್ಲೂಕಿನ ಕಾಡರಾಮನಹಳ್ಳಿಯ ಖಾಸಗಿ ವ್ಯಕ್ತಿಯ ಜಮೀನಿನ ಮರದಲ್ಲಿದ್ದ ಎಂಟು ಬಾವಲಿಗಳನ್ನು ಹೊಡೆದು ಹಾಕಿದ್ದರು. ಖಚಿತ ಮಾಹಿತಿ ಮೇರೆಗೆ ಹುಲಿಯೂರುದುರ್ಗ ವಲಯ ಅರಣ್ಯ ಅಧಿಕಾರಿ ಜಗದೀಶ್‌ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮೃತ ಬಾವಲಿಗಳನ್ನು ವಶಕ್ಕೆ ಪಡೆದು, ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT