ಕುಣಿಗಲ್: 25 ತಿಂಗಳ ನಂತರ ಪುರಸಭೆ ಅಧ್ಯಕ್ಷೆ ಮಂಜುಳಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಬೋಗಸ್ ಬಿಲ್, ವಿದ್ಯಾರ್ಥಿಗಳ ಪ್ರೋತ್ಸಾಹಧನ ವಿತರಣೆ ಲೋಪ, ಪಾದಚಾರಿ ಮಾರ್ಗ ತೆರವಿನ ಅಸಮರ್ಪಕ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಭೆ ಮುಂದೂಡಿದ ಘಟನೆ ಮಂಗಳವಾರ ನಡೆಯಿತು.

ಸಭೆ ಪ್ರಾರಂಭವಾಗುತ್ತಿದ್ದಂತೆ ಸದಸ್ಯ ಕೃಷ್ಣ, ಆನಂದ್ ಕಾಂಬ್ಳಿ ಪುರಸಭೆಯಲ್ಲಿ ಅಧ್ಯಕ್ಷರಿಗಿಂತಲೂ ಅವರ ಪತಿಯ ಮಧ್ಯಪ್ರವೇಶ ಹೆಚ್ಚಾಗಿದೆ. ಅಧ್ಯಕ್ಷರು ಎಚ್ಚರವಹಿಸಲು ಮನವಿ ಮಾಡಿದರು.

ವಿದ್ಯುತ್ ಚಿತಾಗಾರದ ಕಿಟಕಿಗಳ ಗಾಜು ಒಡೆದುಹೋಗಿದ್ದು, ದುರಸ್ತಿಗಾಗಿ ₹65 ಸಾವಿರ ಖರ್ಚು ಮಾಡಿರುವ ಬಗ್ಗೆ ಬೋಗಸ್ ಬಿಲ್ ಸೃಷ್ಠಿ ಮಾಡಿರುವ ಬಗ್ಗೆ ಮತ್ತು ಪುರಸಭೆಯಲ್ಲಿ ಮುಖ್ಯಾಧಿಕಾರಿಗೆ ಕೊಠಡಿ ಇದ್ದು, ಕೊಠಡಿಯಲ್ಲಿ ಪ್ರತ್ಯೇಕ ಕೊಠಡಿ, ಶೌಚಾಲಯ ವ್ಯವಸ್ಥೆ ಇದ್ದರೂ ₹84 ಸಾವಿರ ವೆಚ್ಚದಲ್ಲಿ ವಿಂಗಡಣೆ ಮಾಡಿಕೊಂಡಿದ್ದು, ಸಾರ್ವಜನಿಕರಿಗೆ ಸಂಪರ್ಕಿಸಲು ಮುಕ್ತ ಅವಕಾಶ ನೀಡದಿರುವ ಬಗ್ಗೆ ಸದಸ್ಯ ರಂಗಸ್ವಾಮಿ ಆಕ್ಷೇಪ ವ್ಯಕ್ತಪಡಿಸಿ ತೆರವುಗೊಳಿಸಲು ಆಗ್ರಹಿಸಿದರು.

ಟ್ರ್ಯಾಕ್ಟರ್ಗಳನ್ನು ಎಡೆಯೂರಿನಲ್ಲಿ ರಿಪೇರಿ ಮಾಡಿಸಿರುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆಯನ್ನು ಕೇವಲ ಮೂರು ವಾರ್ಡ್ ಫಲಾನುಭವಿಗಳಿಗೆ ವಿತರಣೆ ಮಾಡಿರುವ ಬಗ್ಗೆ ಸದಸ್ಯ ರಾಮಣ್ಣ, ಮಂಜುಳಾ, ವಿಜಯಲಕ್ಷ್ಮಿ, ನಾಗೇಂದ್ರ, ಶ್ರೀನಿವಾಸ ಮೂರ್ತಿ ಆಸ್ಮಾ ಅಸಮಾಧಾನ ವ್ಯಕ್ತಪಡಿಸಿ 23 ವಾರ್ಡ್ ಸದಸ್ಯರಿಗೂ ಮಾಹಿತಿ ನೀಡಿ ಅರ್ಹರಿಗೆಲ್ಲ ವಿತರಣೆಗೆ ಕ್ರಮತೆಗೆದುಕೊಳ್ಳಲು ಆಗ್ರಹಿಸಿದರು.

ಸದಸ್ಯ ನಾಗೇಂದ್ರ, ಪುರಸಭೆಯಲ್ಲಿ ಅಧಿಕಾರಿವರ್ಗದವರು ಸದಸ್ಯರ ನಡುವೆ ಒಡಕು ಮೂಡಿಸಿ, ತಮಾಷೆ ನೋಡುವ ಕಾರ್ಯ ಮಾಡುತ್ತಿದ್ದಾರೆ. ಸದಸ್ಯರಿಗೆ ಮಾಹಿತಿ ನೀಡಲು ವಿಫಲರಾಗಿದ್ದಾರೆ ಎಂದು ದೂರಿದರು.

ಪಾದಚಾರಿ ಮಾರ್ಗದ ಒತ್ತುವರಿ ತೆರವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯ ರಂಗಸ್ವಾಮಿ, ಮೂರು ದಿನ ನಡೆದ ಕಾರ್ಯಾಚರಣೆಗೆ ಎರಡು ಲಕ್ಷ ಹಣ ವ್ಯಯ ಮಾಡಲಾಗಿದೆ. ಪೌರ ಕಾರ್ಮಿಕರು, ಪೊಲೀಸರನ್ನು ಬಳಕೆ ಮಾಡಲಾಗಿದ್ದರೂ ಪ್ರಯೋಜನವಾಗಿಲ್ಲ. ತೆರವಿನ ನೆಪದಲ್ಲಿ ಪರಿಸರ ಸಂರಕ್ಷಣೆಯ ಫಲಕಗಳನ್ನು ತೆರವು ಮಾಡಲಾಗಿದೆ. ಮೂರು ದಿನದ ಕಾರ್ಯಾಚರಣೆ ನಂತರ ಮತ್ತೆ ಗೂಡಂಗಡಿಗಳು ರಸ್ತೆಯನ್ನು ಅತಿಕ್ರಮಿಸುತ್ತಿದೆ. ಕೆಲವರ ಒತ್ತಡಕ್ಕೆ ಮಣಿದು ಕಾರ್ಯಾಚರಣೆ ಮಾಡಿದ್ದು ಸರಿಯಲ್ಲ ಎಂದರು.

ಚರ್ಚೆ ಕಾವೇರುತ್ತಿದ್ದಂತೆ ಪರ ಮತ್ತು ವಿರೋಧ ವಾದಗಳು ಮಂಡನೆಯಾಗಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಗೆ ಮುಖ್ಯಾಧಿಕಾರಿ ತೆರಳಬೇಕಾದ ಕಾರಣ ಸಭೆ ಮುಂದೂಡಲಾಯಿತು.

ಹುಳಿಯಾರ್ನಿಂದ ಕುಣಿಗಲ್ ಪುರಸಭೆಗೆ ನಿಯೋಜನೆಗೊಂಡಿರುವ ಸಿಬ್ಬಂದಿ ಆನಂದ್ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಅಸಮಾಧಾನಗೊಂಡ ಸದಸ್ಯರು ನಿಯೋಜನೆಯನ್ನು ರದ್ದುಗೊಳಿಸಿ ಮೂಲ ಸ್ಥಾನಕ್ಕೆ ತೆರಳಲು ನಿರ್ಣಯ ಕೈಗೊಂಡರು.

ಉಪಾಧ್ಯಕ್ಷ ಮಲ್ಲಿಪಾಳ್ಯ ಶ್ರೀನಿವಾಸ್, ಎಂಜಿನಿಯರ್ ಬಿಂಧುಮಾಧವ್, ಚಂದ್ರಶೇಖರ್, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.