ಮಧುಗಿರಿ: ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಸೋಗೇನಹಳ್ಳಿ ಗೊಲ್ಲರ ಹಟ್ಟಿಯಲ್ಲಿ ಭಾನುವಾರ ಚಿರತೆ ದಾಳಿಗೆ 4 ಕುರಿಗಳು ಸಾವನ್ನಪ್ಪಿವೆ.
ಗ್ರಾಮದ ಸಿದ್ದಗಂಗಮ್ಮ ಎಂಬುವರಿಗೆ ಸೇರಿದ ಕುರಿ ರೊಪ್ಪದಲ್ಲಿದ್ದ ಕುರಿಗಳ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ಇತ್ತೀಚೆಗೆ ಚಿರತೆಯ ದಾಳಿಯಿಂದಾಗಿ ಕುರಿಗಳು ಬಲಿಯಾಗುತ್ತಿವೆ. ಇದರಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಗುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಹಾವಳಿ ತಪ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ