ಭಾನುವಾರ, ಜುಲೈ 3, 2022
25 °C

ತುರುವೇಕೆರೆ: ಸಿಪಿವೈ ರಾಜೀನಾಮೆ ನೀಡಲಿ ಎಂದ ಶಾಸಕ ಮಸಾಲ ಜಯರಾಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುರುವೇಕೆರೆ: ‘ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದ ಬಗ್ಗೆ ಸಚಿವ ಯೋಗೇಶ್ವರ್‌ಗೆ ಬೇಸರವಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಒಳಿತು’ ಎಂದು ಶಾಸಕ ಮಸಾಲ ಜಯರಾಂ ಖಾರವಾಗಿ ಪ್ರತಿಕ್ರಿಯಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಯೋಗೇಶ್ವರ್ ಚಲನಚಿತ್ರ ನಟ. ಅವರು ತಮ್ಮ ಸಿನಿಮಾದಲ್ಲಿ ನಾಯಕರನ್ನು ಬದಲಿಸಿದಂತೆ ರಾಜ್ಯದ ಮುಖ್ಯಮಂತ್ರಿಯನ್ನು ಬದಲು ಮಾಡಬಹುದು ಅಂದುಕೊಂಡಿದ್ದರೆ ಅದು ನಡೆಯದು’ ಎಂದರು.

ಯಡಿಯೂರಪ್ಪರೊಂದಿಗೆ ಎಲ್ಲ ಸಚಿವರು, ಶಾಸಕರು ಹಾಗೂ ಪಕ್ಷದ ಎಲ್ಲ ಮುಖಂಡರು ಬೆನ್ನೆಲುಬಾಗಿ ಇದ್ದಾರೆ. ಬಿಜೆಪಿ ಎಂದರೆ ಯಡಿಯೂರಪ್ಪರು, ಹಾಗಾಗಿ ಹೈಕಮಾಂಡ್ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲಾರದು ಎಂದರು.

ಯಡಿಯೂರಪ್ಪರು ಮಾಡಿರುವ ತಪ್ಪಾದರೂ ಏನು?. ಸಂಕಷ್ಟದಲ್ಲೂ ಪಕ್ಷ ಮತ್ತು ಸರ್ಕಾರವನ್ನು ಅಬಾಧಿತವಾಗಿ ಮುನ್ನಡೆಸುತ್ತಿದ್ದಾರೆ. ಅವರ ಬೆನ್ನಿಗೆ ನಿಲ್ಲುವುದು ಪ್ರತಿಯೊಬ್ಬ ಬಿಜೆಪಿ ಶಾಸಕರ ಕರ್ತವ್ಯ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು