ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಂಥಾಲಯ ಇಲಾಖೆಯಿಂದ ಸಾಹಿತಿಗಳ ಕಡೆಗಣನೆ

ಗ್ರಂಥಪಾಲಕರ ದಿನಾಚರಣೆ ನಾಳೆ
Published 11 ಆಗಸ್ಟ್ 2024, 7:48 IST
Last Updated 11 ಆಗಸ್ಟ್ 2024, 7:48 IST
ಅಕ್ಷರ ಗಾತ್ರ

ತುಮಕೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಆ.12ರಂದು ನಗರದ ಕೇಂದ್ರ ಗ್ರಂಥಾಲಯದಲ್ಲಿ ಏರ್ಪಡಿಸಿರುವ ರಾಜ್ಯಮಟ್ಟದ ಗ್ರಂಥ ಪಾಲಕರ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಲೇಖಕರು, ಪ್ರಕಾಶಕರನ್ನು ಆಹ್ವಾನಿಸದಿರುವುದಕ್ಕೆ ಸಾಹಿತ್ಯ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್‌.ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರು ಭಾಗವಹಿಸುತ್ತಿರುವ ಕಾರ್ಯಕ್ರಮಕ್ಕೆ ಹೆಚ್ಚಿನ ಜನರಿಗೆ ಆಹ್ವಾನವೇ ಇಲ್ಲ. ಮಾಧ್ಯಮಗಳಿಗೂ ಮಾಹಿತಿ ನೀಡದೆ ಗುಟ್ಟಾಗಿ ಕಾರ್ಯಕ್ರಮ ನಡೆಸುತ್ತಿದ್ದಾರೆ.

‘ಇಲಾಖೆಯ ಅಧಿಕಾರಿಗಳು ಶಾಲಾ–ಕಾಲೇಜಿನ ಮಕ್ಕಳನ್ನು ಸೇರಿಸಿ, ಕಾರ್ಯಕ್ರಮ ಮುಗಿಸಿದರೆ ಸಾಕು ಎಂಬ ಮನಸ್ಥಿತಿ ಹೊಂದಿರುವಂತೆ ಕಾಣುತ್ತಿದೆ. ಪ್ರತಿ ಸಲ ಇದೇ ರೀತಿಯಾಗುತ್ತಿದೆ. ಜನಪ್ರತಿನಿಧಿಗಳನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಸಾಹಿತ್ಯಾಸಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಕಾಶಕರು, ಪ್ರಕಾಶನ ಸಂಸ್ಥೆಗಳನ್ನು ಹೊರಗಿಟ್ಟು ಸಮಾರಂಭ ನಡೆಸುತ್ತಿರುವುದರ ಹಿಂದಿನ ಉದ್ದೇಶ ಏನು? ಗ್ರಂಥಾಲಯ ಇಲಾಖೆಗೆ ಪ್ರಕಾಶಕರೇ ಮೂಲ. ಅವರನ್ನು ಕಡೆಗಣಿಸುತ್ತಿರುವುದು ಯಾಕೆ? ಕಾರ್ಯಕ್ರಮಕ್ಕೆ ಒಂದು ದಿನ ಮಾತ್ರ ಬಾಕಿ ಇದ್ದು, ಜಿಲ್ಲೆಯ ಪ್ರಮುಖರಿಗೆ ಈ ಬಗ್ಗೆ ಸಣ್ಣ ಮಾಹಿತಿಯೂ ಇಲ್ಲ. ಕನಿಷ್ಠ ಆಹ್ವಾನ ಪತ್ರಿಕೆಯೂ ತಲುಪಿಲ್ಲ. ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜಿಸಿದ ಗ್ರಂಥಾಲಯ ಇಲಾಖೆಗೆ ಜಿಲ್ಲೆಯ ಸಾಹಿತಿ, ಲೇಖಕರು, ಸಾಹಿತ್ಯ ಪ್ರಿಯರ ಅವಶ್ಯಕತೆ ಇಲ್ಲವೇ? ಎಂದೂ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT