ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದುಸ್ವಾಮಿ ಹೇಳಿಕೆ; ರಾಜಕೀಕರಣಗೊಳಿಸಬೇಡಿ

ಅಖಿಲ ಭಾರತ ವೀರಶೈವ ಮಹಾಸಭಾ ಮನವು
Last Updated 21 ನವೆಂಬರ್ 2019, 8:44 IST
ಅಕ್ಷರ ಗಾತ್ರ

ತುಮಕೂರು: ಮಾಧುಸ್ವಾಮಿ ವಿರುದ್ಧ ಕುರುಬ ಸಮಾಜದವರು ಪೂರ್ವಾಗ್ರಹಪೀಡಿತರಾಗಿ ಪ್ರತಿಭಟನೆಗೆ ಇಳಿದಿದ್ದಾರೆ. ವೃತ್ತಕ್ಕೆ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದ ಮಾಧುಸ್ವಾಮಿ ಅವರ ಹೇಳಿಕೆಯನ್ನು ರಾಜಕೀಕರಣಗೊಳಿಸುವುದು ಬೇಡ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್‌ ಒತ್ತಾಯಿಸಿದರು.

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧುಸ್ವಾಮಿ ಸಮಾಜವಾದ ಸಿದ್ಧಾಂತದ ಅಡಿಯಲ್ಲಿ ಬೆಳೆದವರು. ಅವರು ಎಂದಿಗೂ ಜಾತಿ ರಾಜಕಾರಣ ಮಾಡಿದವಲ್ಲ. ಯಾರಿಗೂ ಏಕವಚನದಲ್ಲಿ ಮಾತನಾಡುವ ವ್ಯಕ್ತಿ ಅಲ್ಲ. ವೃತ್ತಕ್ಕೆ ಹೆಸರಿಡುವ ವಿಚಾರವನ್ನುಕಾನೂನಾತ್ಮಕವಾಗಿ ಪರಿಹರಿಸಿಕೊಳ್ಳಿ ಎಂದಷ್ಟೇ ಹೇಳಿದ್ದು. ಅದನ್ನೇ ಕುರುಬ ಸಮಾಜದವರು ದೊಡ್ಡದು ಮಾಡುತ್ತಿದ್ದಾರೆ ಎಂದು ಹೇಳಿದರು.

ಇತಿಹಾಸದಲ್ಲಿ ಎಂದು ಕುರುಬ ಸಮಾಜ ಮತ್ತು ವೀರಶೈವ ಸಮಾಜದವರು ಕಿತ್ತಾಡಿಲ್ಲ. ಅದು ಮುಂದೆಯೂ ಆಗುವುದು ಬೇಡ. ಸಮಾಜ – ಸಮಾಜದ ನಡುವೆ ವೈಮನಸ್ಸು ಉಂಟಾಗುವುದು ಬೇಡ. ಈ ವಿಚಾರವನ್ನು ಇಲ್ಲಿಗೆ ಕೊನೆಗೊಳಿಸಿ ಎಂದು ಮನವಿ ಮಾಡಿದರು.

ಕನಕ ದಾಸರು ಕೇವಲ ಕುರುಬರ ಸ್ವತ್ತಲ್ಲ. ಅವರೊಬ್ಬ ದಾರ್ಶನಿಕ ವ್ಯಕ್ತಿ. ಅವರು ಎಲ್ಲರ ಸ್ವತ್ತು. ಅಂತಹ ಮಹಾನ್‌ ವ್ಯಕ್ತಿಯ ಹೆಸರನ್ನು ವಿವಾದಕ್ಕೆ ಎಳೆದು ತರುವುದು ತರವಲ್ಲ. ವೃತ್ತಕ್ಕೆ ಕನಕ ದಾಸರ ಹೆಸರು ಇಡಲು ನಮ್ಮ ಅಭ್ಯಂತರವಿಲ್ಲ. ಅವರು ಎಲ್ಲರಿಗೂ ಮಾರ್ಗದರ್ಶಕರು. ಅವರ ಹಾದಿಯಲ್ಲಿ ಎಲ್ಲರೂ ನಡೆಯಬೇಕು ಎಂದು ಹೇಳಿದರು.

ಗೋಷ್ಠಿಯಲ್ಲಿ ಅಖಿಲ ಬಾರತ ವೀರಶೈವ ಮಹಾಸಭಾದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್‌ ಕುಮಾರ್‌, ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಿವಕುಮಾರ್‌, ಕೋಶಾಧ್ಯಕ್ಷ ಎಂ.ಬಿ. ಶೇಖರ್‌, ಉಪಾಧ್ಯಕ್ಷ ಆರ್‌.ಬಿ.ಜಯಣ್ಣ ಇದ್ದರು.

ಅಗತ್ಯ ಬಿದ್ದರೆ ಹೋರಾಟ

‘ಅವರು (ಕುರುಬ ಸಮಾಜ) ಹುಳಿಯಾರು ಬಂದ್‌ ಮಾಡಿದ ರೀತಿ ನೀವು ತುಮಕೂರು ಬಂದ್‌ ಮಾಡುವಿರಾ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದರ ಅಗತ್ಯ ಬಿದ್ದರೆ ಖಂಡಿತಾ ಬೀದಿಗಿಳಿದು ಹೋರಾಡುತ್ತೇವೆ. ಅಂತಹ ಅಗತ್ಯವೇನೂ ಈಗ ಇಲ್ಲ. ಹಾಗಾಗಿ ಆ ಬಗೆಯ ಯೋಚನೆಯೂ ಇಲ್ಲ ಎಂದು ಸಾಗರನಹಳ್ಳಿ ನಟರಾಜ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT