ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆ: ತುಂಬಿದ ಕೆರೆ, ಕಟ್ಟೆ ‌

Published 4 ಜೂನ್ 2024, 2:23 IST
Last Updated 4 ಜೂನ್ 2024, 2:23 IST
ಅಕ್ಷರ ಗಾತ್ರ

‌ಗುಬ್ಬಿ: ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಉತ್ತಮವಾದ ಮಳೆ ಸುರಿದಿದೆ. ಹಳ್ಳ–ಕೊಳ್ಳ, ಸಣ್ಣ ಪುಟ್ಟ ಕೆರೆ ಕಟ್ಟೆಗಳು ತುಂಬಿವೆ.

ಕಳೆದ ಬಾರಿ ಮಳೆ ಇಲ್ಲದೆ ತೀವ್ರ ಬರಗಾಲದಿಂದ ಸಂಕಷ್ಟಕ್ಕೆ ಈಡಾಗಿದ್ದ ರೈತಾಪಿ ವರ್ಗ ಈ ಬಾರಿ ಉತ್ತಮ ಮಳೆಯಾಗುತ್ತಿರುವುದರಿಂದ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ.

ದನ, ಕರು, ಪ್ರಾಣಿ, ಪಕ್ಷಿಗಳಿಗೂ ಕುಡಿಯಲು ನೀರಿಲ್ಲದೆ ಒಣಗಿದ್ದ ಕಟ್ಟೆಗಳಲ್ಲಿ ನೀರು ತುಂಬಿದೆ. ತೆಂಗು, ಅಡಿಕೆ ಹಾಗೂ ಗದ್ದೆ ಬಯಲುಗಳಲ್ಲಿ ನೀರು ಸಾಕಷ್ಟು ಹರಿಯುತ್ತಿರುವುದರಿಂದ ಅಂತರ್ಜಲ ಏರಿಕೆಯಾಗಲಿದೆ ಎಂದು ರೈತ ಕೆಂಪರಾಜು ತಿಳಿಸಿದರು.

ಹಸಿರು ಚಿಗುರಿರುವುದರಿಂದ ದನ, ಕರು, ಕುರಿ, ಮೇಕೆಗಳಿಗೆ ಮೇವಿನ ಕೊರತೆ ನೀಗಿದೆ ಎಂದು ರೈತ ತಿಮ್ಮಯ್ಯ ಹರ್ಷ ವ್ಯಕ್ತಪಡಿಸಿದರು.

ಕಳೆದ ಭಾನುವಾರ ರಾತ್ರಿ ಗುಡುಗು, ಮಿಂಚು ಹಾಗೂ ಸಿಡಿಲಿನ ಆರ್ಭಟದೊಂದಿಗೆ ಸುರಿದ ಬಾರಿ ಮಳೆಗೆ ಅನೇಕ ಕಡೆ ಅಡಿಕೆ, ತೆಂಗಿನ ಮರಗಳು ಮರಿದು ಬಿದ್ದಿವೆ. ಹಲವು ಕಡೆ ಮನೆಗಳ ಗೋಡೆ ಕುಸಿದಿದೆ.

ಕಡಬ ಹೋಬಳಿ ಸಿ ಕುನ್ನಾಲ ಗ್ರಾಮದ ಈರುಳ್ಳಿ ವ್ಯಾಪಾರಿ ಗೌಸ್ ಪೀರ್ ಅವರ ಮನೆಗೆ ನೀರು ನುಗ್ಗಿ ದಾಸ್ತಾನು ಮಾಡಿದ್ದ ಈರುಳ್ಳಿ ನೀರು ಪಾಲಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ನಿಟ್ಟೂರು ಗದ್ದೆ ಬಯಲಿನಲ್ಲಿ ನೀರು ಹರಿಯುತ್ತಿರುವುದು
ನಿಟ್ಟೂರು ಗದ್ದೆ ಬಯಲಿನಲ್ಲಿ ನೀರು ಹರಿಯುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT