ಪಾವಗಡ: ವಿಜಯದಶಮಿ ಹಬ್ಬವನ್ನು ತಾಲ್ಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಬುಧವಾರ ಆಯುಧಪೂಜೆ ದಿನ ಪಟ್ಟಣದ ಶನೈಶ್ಚರ ದೇಗುಲದ ಮುಂದೆ ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಶನೈಶ್ಚರ ದೇಗುಲ, ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ದೇಗುಲ, ಸಂಕಾಪುರ ಸುವರ್ಚಲಾ ಆಂಜನೇಯ ದೇಗುಲ ಸೇರಿದಂತೆ ಹಲವು ದೇಗುಲಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಶನೈಶ್ಚರ ದೇಗುಲದಲ್ಲಿ ಸೀತಲಾದೇವಿಗೆ ನಿತ್ಯ ವಿವಿಧ ಅಲಂಕಾರ ಮಾಡಲಾಗಿತ್ತು.

ಪಟ್ಟಣದಲ್ಲಿ ನಡೆದ ಜಂಬೂ ಸವಾರಿಯಲ್ಲಿ ತಹಶೀಲ್ದಾರ್ ವೈ.ರವಿ ಅವರು ವಾದ್ಯವೃಂದದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿದರು.

ವೈ.ಎನ್.ಹೊಸಕೋಟೆಯಲ್ಲಿ ರಾಜಮನೆತನದ ಸಾಂಪ್ರದಾಯಿಕ ಜಂಬೂ ಸವಾರಿ ನಡೆಯಿತು. ರಾಜಾ ಜಯಚಂದ್ರರಾಜು ಅವರು ಕೋಟೆ ಆಂಜನೇಯಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಆರಂಭವಾಯಿತು. ಗ್ರಾಮದೇವತೆಗಳ ಉತ್ಸವ ಮೂರ್ತಿಗಳೊಂದಿಗೆ ನಡೆದ ಈ ಮೆರವಣಿಗೆ ಬನ್ನಿ ಮಂಟಪಕ್ಕೆ ತಲುಪಿತು. ಅಲ್ಲಿ ಶಮಿ ಪತ್ರೆ ಹಂಚಿಕೆ ಮತ್ತು ಶುಭಾಶಯಗಳ ವಿನಿಮಯ ನಡೆಯಿತು.

ಬೆಸ್ಕಾಂ ಕಚೇರಿಯಲ್ಲಿರುವ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಸಹ ವಿಶೇಷ ಪೂಜೆ ನಡೆಯಿತು. ಬನ್ನಿ ಮಂಟಪಕ್ಕೆ ಬಂದ ಭಕ್ತರು ವಿನಾಯಕನ ದರ್ಶನ ಮಾಡಿ ಪ್ರಸಾದ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.