ತುರುವೇಕೆರೆ: ಪಟ್ಟಣದ ತಿಪಟೂರು ರಸ್ತೆಯ ಮಾನಸ ಗಾರ್ಡನ್ ಶಾಲೆಯ ಸಮೀಪ ಮಂಗಳವಾರ ಸಂಜೆ ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಆನೇಕೆರೆ ಗ್ರಾಮ ಪಂಚಾಯಿತಿ ಸದಸ್ಯೆ ಭೂವನಹಳ್ಳಿ ಪಾಳ್ಯದ ಭವ್ಯಾ ಪತಿ ಬಿ.ಜೆ.ರಮೇಶ್(42) ಮೃತರು.
ರಮೇಶ್ ತುರುವೇಕೆರೆಯಿಂದ ಭೂವನಹಳ್ಳಿ ಪಾಳ್ಯ ಗ್ರಾಮಕ್ಕೆ ತೆರಳುವಾಗ ಜೋಗಿಪಾಳ್ಯದ ಕಡೆಯಿಂದ ಬಂದ ಬೈಕ್ ಮಧ್ಯೆ ಡಿಕ್ಕಿಯಾಗಿದೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.