ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಲ್ಲಿ ಈವರೆಗೆ 85 ಜನಸ್ಪಂದನ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿರುವುದನ್ನು ಸಹಿಸದ ಕೆಲವರು ಕಾರ್ಯಕ್ರಮ ನಿಲ್ಲಿಸಲು ಯತ್ನಿಸುತ್ತಿದ್ದಾರೆ ಎಂದು ಶಾಸಕ ಸಿ.ಬಿ. ಸುರೇಶ್ ಬಾಬು ದೂರಿದರು.

ತಾಲ್ಲೂಕಿನಲ್ಲಿ ಶುಕ್ರವಾರ ಹೊನ್ನೆಬಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೃದ್ಧಾಪ್ಯ ವೇತನ ಸೇರಿದಂತೆ ಇತರೆ ಯೋಜನೆಗಳ ಅರ್ಜಿಗಳೇ ಇಲ್ಲದಾಗಿದೆ. ಪ್ರತಿ ಸಭೆಯಲ್ಲೂ ಬಂದ ಅರ್ಜಿಗಳನ್ನು ಪರಿಶೀಲಿಸಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನೀಡಿ, ನಿಗದಿತ ಸಮಯದಲ್ಲಿ ಪರಿಹರಿಸಲಾಗುತ್ತಿದೆ. 100ನೇ ಜನಸ್ಪಂದನ ಸಂದರ್ಭದಲ್ಲಿ ಈವರೆಗೆ ಈ ಕಾರ್ಯಕ್ರಮದಡಿ ಬಂದ ಅರ್ಜಿಗಳಲ್ಲಿ ಬಗೆಹರಿದ, ಉಳಿಕೆಯಾದ ಅರ್ಜಿಗಳೆಷ್ಟು ಎಂಬ ಮಾಹಿತಿ ಪುಸ್ತಕ ಬಿಡುಗಡೆಗೊಳಿಸಲಾಗುವುದು ಎಂದರು.

ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಚ್.ಆರ್. ಶಶಿಧರ್ ಮಾತನಾಡಿ, 224 ಕೇಂದ್ರಗಳಲ್ಲಿ ಈ ಕಾರ್ಯಕ್ರಮ ಮಾಡುತ್ತಿರುವುದು ಶಾಸಕರ ಸಾಧನೆ. ಕೆಲಸದ ಬಗ್ಗೆ ಕೆಲವರು ಟೀಕೆ ಮಾಡುವುದನ್ನು ಬಿಡಬೇಕು. ಕ್ಷಲ್ಲಕ ರಾಜಕೀಯ ಮಾಡುವುದು ತರವಲ್ಲ ಎಂದು ಹೇಳಿದರು.

ಹೊನ್ನೇಬಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಶೈಲ, ಉಪಾಧ್ಯಕ್ಷೆ ಪಲ್ಲವಿ ಬಿ.ಆರ್., ತಹಶೀಲ್ದಾರ್ ಕೆ.ಪುರಂದರ, ಇಒ ದೊಡ್ಡಸಿದ್ದಯ್ಯ, ಸಿಡಿಪಿಒ ಹೊನ್ನಪ್ಪ, ಎಇಇ ತಿಮ್ಮಯ್ಯ, ಮಾರುತಿ, ಪಿಡಿಒ ಭೈರಪ್ಪ ಹಾಗೂ ಹೊನ್ನೇಬಾಗಿ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

ತಾಲ್ಲೂಕಿನ ಅರೆಮಲೆನಾಡು ಎಂದು ಪ್ರಸಿದ್ಧಿ ಪಡೆದ ಗಿಣಿವಜ್ರ ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿ ಪ್ರಾಣಿ ಸಂಗ್ರಹಾಲಯದೊಂದಿಗೆ ಪ್ರವಾಸಿ ತಾಣ ಅಭಿವೃದ್ಧಿ ಮಾಡುವ ಯೋಜನೆಯಿದೆ.
ಸಿ.ಬಿ. ಸುರೇಶ್ಬಾಬು ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.