ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಿಗೇನಹಳ್ಳಿ | ಮನೆ ಮೇಲೆ ಬಿದ್ದ ವಿದ್ಯುತ್ ತಂತಿ: ತೆರವುಗೊಳಿಸದ ಅಧಿಕಾರಿಗಳು

Published 8 ಜೂನ್ 2024, 14:00 IST
Last Updated 8 ಜೂನ್ 2024, 14:00 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ಮನೆ ಮೇಲೆ ಬೃಹತ್ ಗಾತ್ರದ ಮರವೊಂದು ಉರಳಿ ಬೀಳುವುದರ ಜೊತೆಗೆ ಮನೆಯ ಮೇಲಿದ್ದ ಶೀಟ್‌ ಹಾಳಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಸಂಜೆ ಸುರಿದ ಗಾಳಿ- ಮಳೆಗೆ ದಂಡಿಪುರದ ಲಕ್ಷ್ಮೀದೇವಮ್ಮ ಅವರ ಮನೆ ಮೇಲೆ ಬೃಹತ್ ಗಾತ್ರದ ಮರ ಉರುಳಿದೆ. ಇದರಿಂದ ಮನೆ ಮೇಲಿದ್ದ ಸುಮಾರು ಐದಾರು ಶೀಟ್‌ ಹಾಳಾಗಿರುವುದಲ್ಲದೇ ವಿದ್ಯುತ್ ತಂತಿ ಮನೆ ಮೇಲೆ ಬಿದ್ದಿದೆ. ವಿದ್ಯುತ್‌ ಸರಬರಾಜು ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಅಧಿಕಾರಿಗಳ ವಿರುದ್ಧ ಆಕ್ರೋಶ: ಮನೆ ಮೇಲೆ ದೊಡ್ಡ ಮರ ಬಿದ್ದಿರುವುದಲ್ಲದೇ ವಿದ್ಯುತ್ ತಂತಿ ಸಹ ಬಿದ್ದಿದೆ. ಯಾವುದೇ ಸಮಸ್ಯೆಯಾಗದಂತೆ ವಿದ್ಯುತ್ ತಂತಿ ತೆರವುಗೊಳಿಸುವಂತೆ ಬೆಸ್ಕಾಂ ಇಲಾಖೆ ಎಇ ಅವರಿಗೆ ಕರೆ ಮಾಡಿದರೆ ‘ಜಂಪ್ ತೆಗೆಸಿದ್ದೇವೆ. ಮರ ಮತ್ತು ಕೊಂಬೆ ತೆರವುಗೊಳಿಸುವ ಜವಾಬ್ದಾರಿ ನಮ್ಮದ್ದಲ್ಲ’ ಎಂಬ ಉತ್ತರ ನೀಡುತ್ತಾರೆ. ಇಲ್ಲಿ ವಿದ್ಯುತ್‌ ಪಾಸಾಗಿ ಗ್ರೌಂಡ್ ಬರುತ್ತಿದೆ. ಯಾರಿಗಾದರೂ ಹೆಚ್ಚುಕಡಿಮೆಯಾದರೆ ಯಾರು ಜವಾಬ್ದಾರರು. ಸಂಬಂಧಪಟ್ಟವರು ಶೀಘ್ರ ಮರ ತೆರವುಗೊಳಿಸುವುದರ ಜೊತೆಗೆ ತಂತಿ ಸರಿಪಡಿಸುವಂತೆ ಬಾಲಾಜಿ, ಶಿವಶಂಕರ್, ಜಗನ್ನಾಥ್, ವೆಂಕಟಪ್ಪ, ಗಂಗಾಧರ್, ರಂಗಧಾಮಪ್ಪ, ರಾಮದಾಸ್, ಸತೀಶ್, ನಾರಾಯಣಪ್ಪ, ನಾಗರಾಜಪ್ಪ, ಜ್ಯೋತಿ, ತಿಮ್ಮರಾಜಮ್ಮ, ನಿರ್ಮಲಮ್ಮ, ಆಟೊ ಶಿವಪ್ಪ, ಲಕ್ಷ್ಮೀದೇವಮ್ಮ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT