ಬುಧವಾರ, ಮೇ 12, 2021
18 °C

ಹಬ್ಬದ ಆಚರಣೆಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ಕೊರೊನಾ ಸೋಂಕಿನ ಕರಿನೆರಳಿನ ನಡುವೆಯೂ ಯುಗಾದಿ ಹಬ್ಬದ ಆಚರಣೆಗೆ ಜನತೆ ಅಗತ್ಯವಸ್ತುಗಳನ್ನು ಖರೀದಿಸುವ ಕಾರ್ಯದಲ್ಲಿ ತೊಡಗಿದ್ದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ತರಕಾರಿ ಹೂ, ಹಣ್ಣು ಮಾರುಕಟ್ಟೆಯಲ್ಲಿ ಬೆಳಿಗ್ಗಿನಿಂದಲೇ ಜನರು ಯುಗಾದಿ ಹಬ್ಬದ ಅಗತ್ಯ ವಸ್ತುಗಳಾದ ಮಾವಿನ ಸೊಪ್ಪು, ಬೇವಿನ ಹೂ, ಬಾಳೆದಿಂದು ಸೇರಿದಂತೆ ಹಣ್ಣುಗಳನ್ನು ಖರೀದಿಸಿದರು. ಸರ್ಕಾರದ ಮಾರ್ಗಸೂಚಿಯ ಅನ್ವಯದಂತೆ ಹೆಚ್ಚಿನ ಜನರು ತಮ್ಮ ಮನೆಗಳಲ್ಲಿಯೇ ಸಾಂಪ್ರದಾಯಿಕ ಆಚರಣೆ ಮಾಡಿಕೊಂಡು ಯುಗಾದಿ ಆಚರಣೆಗೆ ಸಿದ್ಧಗೊಂಡಿದ್ದಾರೆ.

ಹೆಂಗಳೆಯರು ಮನೆಯನ್ನು ಸ್ವಚ್ಛಗೊಳಿಸಿ ಸಿಂಗಾರ ಮಾಡಲುವಲ್ಲಿ ನಿರತರಾಗಿದ್ದರೆ ಮನೆಯ ಹಿರಿಯರು ಬೇವು–ಬೆಲ್ಲ ತಯಾರಿಸುವಲ್ಲಿ ಸನ್ನದ್ಧರಾಗಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ಹೊಸ ವರ್ಷಾಚರಣೆಯ ಮೊದಲ ಹಬ್ಬವಾಗಿರುವುದರಿಂದ ವಿಜೃಂಭಣೆ ಯಿಂದ ಆಚರಣೆ ಮಾಡುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು