ಮೊಳಕೆ ಹರುಳಿಕಾಳು ಸಾಂಬಾರ್‌ನಲ್ಲಿ ರಾಗಿ ಮುದ್ದೆ ಉಣ್ಣುವ ಸ್ಪರ್ಧೆ

7

ಮೊಳಕೆ ಹರುಳಿಕಾಳು ಸಾಂಬಾರ್‌ನಲ್ಲಿ ರಾಗಿ ಮುದ್ದೆ ಉಣ್ಣುವ ಸ್ಪರ್ಧೆ

Published:
Updated:

ತುಮಕೂರು: ಈಚೆಗೆ ಮಂಡ್ಯ ಜಿಲ್ಲೆ ಮಂಗಲ ಗ್ರಾಮದ ಮಾರಮ್ಮ  ದೇವಾಲಯದ ಆವರಣದಲ್ಲಿ ನಡೆದ ನಾಟಿ ಕೋಳಿ ಸಾಂಬಾರ್ ಜೊತೆ ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯಿಂದ ಪ್ರೇರಿತರಾದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಗ್ರಾಮದ ಮಹಿಳಾ ಜನತಾ ಯುವ ಕ್ರೀಡಾ ಸಂಘ ಹಾಗೂ  ಮಾಕುವಳ್ಳಿ ಮಹಿಳಾ ಜನತಾ ಕ್ರೀಡಾ ಸಂಘ ಹೋಬಳಿ ಮಟ್ಟದ ‘ಮೊಳಕೆ ಹುರುಳಿಕಾಳು ಸಾಂಬಾರ್‌ನಲ್ಲಿ ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯನ್ನು ಶನಿವಾರ (ಜುಲೈ 7) ಆಯೋಜಿಸಿದೆ.

ಶೆಟ್ಟಿಕೇರಿ ಗ್ರಾಮದ ಜನತಾ ಪ್ರೌಢ ಶಾಲಾ ಆವರಣದಲ್ಲಿ ಮಧ್ಯಾಹ್ನ 1 ಗಂಟೆಗೆ ಸ್ಪರ್ಧೆ ನಡೆಯಲಿದ್ದು, ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಸ್ಪರ್ಧೆ ಆಯೋಜಿಸಲಾಗಿದೆ. ಪ್ರವೇಶ ಶುಲ್ಕ ₹ 50 ನಿಗದಿಪಡಿಸಲಾಗಿದೆ. ಸ್ಪರ್ಧಿಗಳಿಗೆ ಮೊಳಕೆ ಹುರಳಿಕಾಳು ಸಾಂಬಾರ್‌ನಲ್ಲಿ ರಾಗಿ ಮುದ್ದೆ ಉಣ್ಣಲು 15 ನಿಮಿಷ ಕಾಲಮಿತಿ ನಿಗದಿಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವವರು ಬೆಳಿಗ್ಗೆ 10 ಗಂಟೆಯೊಳಗೆ ಖುದ್ದಾಗಿ ಅಥವಾ ದೂರವಾಣಿ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕು ಎಂದು  ಸಂಘಟಕರಾದ ಶೆಟ್ಟಿಕೆರೆ ಜನತಾ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಕೆ.ಎಸ್.ಚಂದ್ರಮೌಳಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಪ್ರಥಮ ಬಹುಮಾನ ₹ 1000, ದ್ವಿತೀಯ ಬಹುಮಾನ ₹ 750, ತೃತೀಯ ಬಹುಮಾನ ₹ 500, ಸಮಾಧಾನಕರ ಬಹುಮಾನ ₹ 250 ಬಹುಮಾನ ವಿತರಣೆ ಮಾಡಲಾಗುವುದು’ ಎಂದು ಹೇಳಿದ್ದಾರೆ.

ಮಾಹಿತಿಗೆ ಕೆ.ಎಸ್.ಚಂದ್ರಮೌಳಿ, ಮೊಬೈಲ್– 9880131410, ರವಿ ಜೆ.ಪಿ.ಚಿಕ್ಕನಹಳ್ಳಿ, ಮೊಬೈಲ್– 8971749668 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !