ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧರಬೆಟ್ಟ; ಮುಜರಾಯಿ ಇಲಾಖೆಯಿಂದ ದಾಸೋಹ ಪ್ರಾರಂಭ

ಬುಧವಾರ ಬೀಗ ಹಾಕಿದ್ದ ದಾಸೋಹ ಭವನ ತೆರೆದು ಊಟದ ವ್ಯವಸ್ಥೆ ಮಾಡಿದ ಅಧಿಕಾರಿಗಳು
Last Updated 9 ಮೇ 2019, 20:14 IST
ಅಕ್ಷರ ಗಾತ್ರ

ಸಿದ್ಧರಬೆಟ್ಟ(ತೋವಿನಕೆರೆ): ಮಧುಗಿರಿ ಉಪ ವಿಭಾಗಾಧಿಕಾರಿ ಅದೇಶದ ಮೇರೆಗೆ ಬುಧವಾರ ಬೀಗಮುದ್ರೆ ಹಾಕಿದ್ದ ಸಿದ್ಧರಬೆಟ್ಟದ ದಾಸೋಹ ಕಟ್ಟಡವನ್ನು ತೆರೆದು ಮುಜರಾಯಿ ಇಲಾಖೆಯು ಗುರುವಾರ ಭಕ್ತರಿಗೆ ಊಟದ ವ್ಯವಸ್ಥೆಯನ್ನು ಮಾಡಿತು.

ಚನ್ನರಾಯನ ದುರ್ಗ ಹೋಬಳಿ ಕಂದಾಯ ಇಲಾಖೆಯ ಸಿಬ್ಬಂದಿ ವರ್ಗ ತರಕಾರಿ ಹಚ್ಚುವುದು, ಊಟ ಬಡಿಸುವುದು ಸೇರಿದಂತೆ ಇತರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು.

ಮುಜರಾಯಿ ಇಲಾಖೆ ತಹಶೀಲ್ದಾರ್ ಮಾತನಾಡಿ, ‘ಇಲಾಖೆಯವತಿಯಿಂದ ಉಚಿತ ಊಟದ ವ್ಯವಸ್ಥೆಯನ್ನು ಇನ್ನು ಮುಂದೆ ಮಾಡಲಾಗುತ್ತದೆ. ಭಕ್ತರು ಸಲಹೆಗಳನ್ನು ನೀಡಬೇಕು’ ಮನವಿ ಮಾಡಿದರು.

ಕೊರಟಗೆರೆ ತಹಶೀಲ್ದಾರ್ ಶಿವರಾಜು, ಮುಜರಾಯಿ ಇಲಾಖೆಯ ತಹಶೀಲ್ದಾರ್ ಸಿದ್ದಗಂಗಮ್ಮ, ಕೊರಟಗೆರೆ ಸಿಪಿಐ ನದಾಫ್, ಎಸ್ ಐ ಮಂಜುನಾಥ್ ಇದ್ದರು.

ಅಧಿಕಾರಿಗಳ ಭೇಟಿಗೆ ಕಾದು ನಿಂತ ಸಮಿತಿ ಸದಸ್ಯರು: ಅಧಿಕಾರಿಗಳು ಬರುವ ಮಾಹಿತಿ ತಿಳಿದು ಸಿದ್ಧೇಶ್ವರ ಸೇವಾ ಸಮಿತಿಯ ನಿರ್ದೇಶಕರು ಮತ್ತು ಸದಸ್ಯರು ಅಗಮಿಸಿ ದಾಸೋಹ ಭವನದ ಮುಂಭಾಗ ಸೇರಿದ್ದರು.

ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವನ್ನು ಮಾತ್ರ ಕಟ್ಟಡ ಪ್ರವೇಶಿಸಲು ಪೋಲಿಸರು ಅವಕಾಶ ನೀಡಿ ಸೇವಾ ಸಮಿತಿಯವರನ್ನು ಗೇಟ್‌ ಬಳಿ ತಡೆದರು.

ಸಿದ್ಧೇಶ್ವರ ಸೇವಾ ಸಮಿತಿಯ ಕಾರ್ಯದರ್ಶಿ ರಾಜಣ್ಣ ತಮ್ಮ ಅಳಲು ತೋಡಿಕೊಂಡರು. ತನ್ನ ಮೇಲೆ ಬಂದಿರುವ ಅಪಾದನೆಗಳ ವಿವರ ಮತ್ತು ಕಟ್ಟಡಗಳನ್ನು ವಶಕ್ಕೆ ಪಡೆದಿರುವ ಬಗ್ಗೆ ದಾಖಲಾತಿ ನೀಡಬೇಕು ಹಾಗೂ ತಾನು ಸೇವಾ ಸಮಿತಿಯ ಕೊಳವೆ ಬಾವಿಯ ನೀರನ್ನು ಸ್ವಂತಕ್ಕೆ ಉಪಯೋಗಿಸಿ ಕೊಳ್ಳುತ್ತಿದ್ದೇನೆ ಎನ್ನುವುದನ್ನು ಸ್ಥಳ ಪರಿಶೀಲನೆ ಮಾಡಬೇಕು ಎಂದು ಅಗ್ರಹಿಸಿದರು.

ಪ್ರತಿ ಹಂತದಲ್ಲೂ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರ ಮಧ್ಯೆ ಮಾತಿನ ಚಕಮಕಿ ಸಾಧ್ಯತೆ ಇತ್ತು. ಆದರೆ, ಪೋಲಿಸರು ಇದಕ್ಕೆ ಅವಕಾಶ ಕೊಡದೇ ಪರಿಸ್ಥಿತಿ ನಿಭಾಯಿಸಿದರು.

ಸಿದ್ದೇಶ್ವರ ಸೇವಾ ಸಮತಿ ಅಧ್ಯಕ್ಷ ಪಿ.ದೊಡ್ಡಸಿದ್ಧಯ್ಯ, ಕಾರ್ಯದರ್ಶಿ ರಾಜಣ್ಣ, ಮಾಜಿ ಅಧ್ಯಕ್ಷ ಬೆಂಡೋಣೆ ಜಯರಾಂ, ಸಮಿತಿಯ ಸದಸ್ಯರು ಗೇಟ್‌ನ ಹೊರಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT