ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮರೆಯಾದ ಮಾನವೀಯ ಮೌಲ್ಯ: ಕುಲಪತಿ ಡಿ.ವಿ.ಪರಮಶಿವಮೂರ್ತಿ

‘ಶ್ರೀರಾಮಕಥಾಮೃತ’ ಕೃತಿ ಲೋಕಾರ್ಪಣೆ
Published : 15 ಸೆಪ್ಟೆಂಬರ್ 2024, 3:31 IST
Last Updated : 15 ಸೆಪ್ಟೆಂಬರ್ 2024, 3:31 IST
ಫಾಲೋ ಮಾಡಿ
Comments

ತುಮಕೂರು: ಪ್ರಸ್ತುತ ಮಕ್ಕಳಲ್ಲಿ ನೈತಿಕತೆ, ಮಾನವೀಯ ಮೌಲ್ಯ, ಕೌಟುಂಬಿಕ ಚಿಂತನೆ ಮರೆಯಾಗುತ್ತಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಿ.ವಿ.ಪರಮಶಿವಮೂರ್ತಿ ಹೇಳಿದರು.

ನಗರದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು, ಪ್ರಧಾನ್ ಪ್ರಕಾಶನದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕವಿ ಪ್ರಧಾನ ವೆಂಕಪ್ಪಯ್ಯ ವಿರಚಿತ ‘ಶ್ರೀರಾಮಕಥಾಮೃತ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಆಧುನಿಕತೆ ಒಪ್ಪಿಕೊಳ್ಳುವ ಕಾಲಘಟ್ಟದಲ್ಲೂ ರಾಮಾಯಣದ ಮೌಲ್ಯಗಳ ಅವಶ್ಯಕತೆ ಇದೆ. ಜನ ಸಾಮಾನ್ಯರಿಗೆ ರಾಮಾಯಣ, ಮಹಾಭಾರತದ ಪರಿಚಯ ತುಂಬಾ ಅಗತ್ಯ. ಜಿಲ್ಲೆಯ ಪಿ.ವಿ.ನಾರಾಯಣ್‍ ಅವರು ಪ್ರಧಾನ್‌ ವೆಂಕಪ್ಪಯ್ಯ ಅವರ ಕೃತಿ ಅನುವಾದ ಮಾಡಿ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದ್ದಾರೆ ಎಂದರು.

ವಿಮರ್ಶಕ ಆರ್.ಲಕ್ಷ್ಮಿನಾರಾಯಣ್‌, ‘ರಾಮಾಯಣದಲ್ಲಿ ಇರುವ ಆರು ಕಾಂಡಗಳು, ಹತ್ತು ಸಾವಿರ ಪದ್ಯಗಳು ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿವೆ’ ಎಂದು ತಿಳಿಸಿದರು.

ಲೇಖಕ ಪಿ.ವಿ.ನಾರಾಯಣ್‍, ಸಂಶೋಧಕ ಬಿ.ನಂಜುಂಡಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಪದಾಧಿಕಾರಿಗಳಾದ ಕಂಟಲಗೆರೆ ಸಣ್ಣಹೊನ್ನಯ್ಯ, ಚಿಕ್ಕಬೆಳ್ಳಾವಿ ಶಿವಕುಮಾರ್‌, ಎಲೆರಾಂಪುರ ರುದ್ರಮೂರ್ತಿ, ಎಂ.ಗೋವಿಂದರಾಯ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT