ಸೋಮವಾರ, ಸೆಪ್ಟೆಂಬರ್ 20, 2021
21 °C

ತುಮಕೂರು: ಹುರುಳಿಕಾಯಿ ಕೆ.ಜಿ.ಗೆ ₹120, ರೈತರಿಗೆ ಸಂತಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೋವಿನಕೆರೆ: ತುಮಕೂರು ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಯಲ್ಲಿ ಗುರುವಾರ ಹುರುಳಿಕಾಯಿ ಕೆ.ಜಿ.ಗೆ 120ರಂತೆ ಮಾರಾಟವಾಗಿದ್ದು, ಹುರುಳಿಕಾಯಿ ಬೆಳೆದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿತ್ತು.

ಕುರಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜುಂಜರಾಮನಹಳ್ಳಿ ಕೃಷಿಕ ಲಕ್ಷ್ಮಿಕಾಂತರಾಜು 20 ಗುಂಟೆಯಲ್ಲಿ ಹುರುಳಿಕಾಯಿ ಬೆಳೆದಿದ್ದು, ಈಗಾಗಲೇ ಐದು ಕ್ವಿಂಟಲ್ ಹುರುಳಿಕಾಯಿ ಕಿತ್ತು ಕೆ.ಜಿ.ಗೆ ₹80ರಿಂದ ₹120ರವರೆಗೂ ಮಾರಾಟ ಮಾಡಿದ್ದಾರೆ. ಕೇವಲ ಒಂದು ಸಲ ಮಾತ್ರ ನೀರನ್ನು ಕೊಟ್ಟಿದ್ದು ಮಳೆ ಆಶ್ರಯದಲ್ಲಿ ಬೆಳೆದಿದೆ.

‘ಇನ್ನೂ ಮೂರು ಸಲ ಹುರುಳಿಕಾಯಿಯನ್ನು ಗಿಡದಿಂದ ಬಿಡಿಸಬಹುದು. ಬೀಜ ಹಾಕಿ ಐವತ್ತು ದಿನಗಳಾಗಿವೆ’ ಎನ್ನುತ್ತಾರೆ ಲಕ್ಷ್ಮಿಕಾಂತರಾಜು ಅವರ ಪತ್ನಿ ಲಿಂಗಮ್ಮ.

‘ಗುರುವಾರ ತುಮಕೂರು ಮಾರುಕಟ್ಟೆಗೆ 130 ಕೆ.ಜಿ ತೆಗೆದುಕೊಂಡು ಹೊಗಿದ್ದೆವು. ಒಂದು ಕೆ.ಜಿ.ಗೆ ₹120ರಂತೆ ಖರೀದಿದಾರರು ಮುಗಿಬಿದ್ದು ಖರೀದಿಸಿದರು’ ಎಂದು ರೈತ ಲಕ್ಷ್ಮಿಕಾಂತರಾಜು ಹರ್ಷ ವ್ಯಕ್ತಪಡಿಸಿದರು.

‘ಮಳೆ ಹೆಚ್ಚಾಗಿದ್ದರಿಂದ ಹುರುಳಿಕಾಯಿ ತಾಕುಗಳು ನಾಶವಾಗಿವೆ. ಉಳಿದು ಕೊಂಡಿರುವ ತಾಕುಗಳಲ್ಲಿ ಅಲ್ಪ ಪ್ರಮಾಣದಲ್ಲಿ ಇಳುವರಿ ಬರುತ್ತಿದ್ದು, ಬೇಡಿಕೆ ಹೆಚ್ಚು ಇರುವುದರಿಂದ ಬೆಲೆ ಹೆಚ್ಚಾಗಿದೆ. ಮೂರು ವರ್ಷಗಳ ಹಿಂದೆಯೂ ಇದೇ ರೀತಿ ಮಳೆ ಹೆಚ್ಚಾದಾಗ ಬೆಲೆಯೂ ಏರಿತ್ತು’ ಎನ್ನುತ್ತಾರೆ ಜೋನಿಗರಹಳ್ಳಿ ತರಕಾರಿ ಹೂವು ಬೆಳೆಗಾರ ಬಸವರಾಜು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು