ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಾಶಿಲಾ ಬೆಟ್ಟಕ್ಕೆ ರೋಪ್‌ವೇ: ಸರ್ವೆ ಪ್ರಾರಂಭ

Published 2 ಏಪ್ರಿಲ್ 2024, 5:03 IST
Last Updated 2 ಏಪ್ರಿಲ್ 2024, 5:03 IST
ಅಕ್ಷರ ಗಾತ್ರ

ಮಧುಗಿರಿ: ಇಲ್ಲಿನ ಏಕಾಶಿಲಾ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಸರ್ವೆ ಕಾರ್ಯ ಸೋಮವಾರ ಪ್ರಾರಂಭವಾಯಿತು.

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟಕ್ಕೆ ರೋಪ್‌ವೇ ಕಾಮಗಾರಿ ಮಾಡುವುದಕ್ಕೆ ಸರ್ವೆ ಕಾರ್ಯ ಮಾಡಿರುವ ಡೈನಾಮಿಕ್ಸ್ ರೋಪ್‌ವೇ ಪ್ರೈವೇಟ್ ಲಿಮಿಟೆಡ್ ಪಿಆರ್‌ಪಿ ಭರತ್ ಜೈನ್ ಸರ್ವೆ ಕಾರ್ಯ ಮಾಡಿದರು.

ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಮಾತನಾಡಿ, ಏಕಾಶಿಲಾ ಬೆಟ್ಟದ ತಪ್ಪಲಿನಿಂದ ಒಂದು ಸರ್ವೆ ಮತ್ತು ಸಿದ್ದರಕಟ್ಟೆ ಕಡೆಯಿಂದ ಸರ್ವೆ ಮಾಡಿದ್ದಾರೆ. ಇವರೆಡರಲ್ಲಿ ಯಾವುದು ಸೂಕ್ತ ಮತ್ತು ಅನುಕೂಲಗಳನ್ನು ನೋಡಿಕೊಂಡು ತಜ್ಞರು ಭೇಟಿ ನೀಡಿ ಪರಿಶೀಲಿಸಿದ ನಂತರ ಕೆಲವು ತಿಂಗಳಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದರು.

ರಾಜ್ಯ ಸಹಕಾರ ಮಹಾಮಂಡಳ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಸದಸ್ಯ ಎಂ.ವಿ.ಮಂಜುನಾಥ್, ಲಾಲಾ ಪೇಟೆ ಮಂಜುನಾಥ್,

ಮುಖಂಡ ಟಿ.ರಾಮಣ್ಣ, ಮನು, ದೀಪು, ಭೀಮಾ, ಕಿಶೋರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT