ಬಾಡಿಗೆ ಕಟ್ಟಡದಲ್ಲಿ 19 ಕಚೇರಿ;ಪ್ರತಿ ತಿಂಗಳು ₹8.55 ಲಕ್ಷ ಪಾವತಿ
ಮೈಲಾರಿ ಲಿಂಗಪ್ಪ
Published : 10 ಫೆಬ್ರುವರಿ 2025, 6:41 IST
Last Updated : 10 ಫೆಬ್ರುವರಿ 2025, 6:41 IST
ಫಾಲೋ ಮಾಡಿ
Comments
ತುಮಕೂರಿನಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ
ಅಬಕಾರಿ ಕಚೇರಿಗೆ ₹1.65 ಲಕ್ಷ ನಿಗಮದ ಕಚೇರಿಗಿಲ್ಲ ಸ್ವಂತ ಕಟ್ಟಡ ಸರ್ಕಾರಿ ಕಟ್ಟಡಕ್ಕೂ ಬಾಡಿಗೆ ನಿಗದಿ
ದಿಕ್ಕಿಗೊಂದು ಸರ್ಕಾರಿ ಕಚೇರಿ
ನಗರ ಭಾಗದಲ್ಲಿ ನಿವೇಶನದ ಕೊರತೆ ಬಾಡಿಗೆ ದುಬಾರಿ ಎಂಬ ಕಾರಣಕ್ಕೆ ಪ್ರಮುಖ ಇಲಾಖೆಯ ಕಚೇರಿಗಳನ್ನು ನಗರ ಹೊರವಲಯಕ್ಕೆ ಸ್ಥಳಾಂತರಿಸಲಾಗುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿ ಶೆಟ್ಟಿಹಳ್ಳಿ ಬಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ಮೈದಾಳ ಪರಿಸರ ಮಾಲಿನ್ಯ ಮತ್ತು ನಿಯಂತ್ರಣ ಮಂಡಳಿ ಕಚೇರಿ ಶ್ರೀದೇವಿ ಕಾಲೇಜು ಹತ್ತಿರ ಸದಾಶಿವ ನಗರದ ಬಾಡಿಗೆ ಕಟ್ಟಡದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಯ ಕಾರ್ಯಗಳು ನಡೆಯುತ್ತಿವೆ. ಹೀಗೆ ಒಂದೊಂದು ಕಚೇರಿ ಒಂದೊಂದು ದಿಕ್ಕಿಗೆ ಇವೆ. ಕೆಲಸದ ನಿಮಿತ್ತ ನಗರಕ್ಕೆ ಬರುವ ಸಾರ್ವಜನಿಕರು ಕಚೇರಿ ಹುಡುಕಲು ಪರದಾಡುತ್ತಿದ್ದಾರೆ. ‘ನಗರದ ಪ್ರಮುಖ ಪ್ರದೇಶದಲ್ಲಿ ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಿಸಿ ಎಲ್ಲ ಇಲಾಖೆಯ ಸೇವೆಗಳು ಒಂದೇ ಕಡೆ ಸಿಗುವಂತೆ ಮಾಡಬೇಕು. ಇದರಿಂದ ಸಾರ್ವಜನಿಕರಿಗೆ ತುಂಬಾ ಪ್ರಯೋಜನವಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿ ಈ ನಿಟ್ಟಿನಲ್ಲಿ ಯೋಚಿಸಿ ಯೋಜನೆ ರೂಪಿಸಬೇಕು’ ಎಂಬುವುದು ಜಿಲ್ಲೆಯ ಜನರ ಒತ್ತಾಯವಾಗಿದೆ.