ಶಿರಾ: ನಗರದ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ನಡೆಯುತ್ತಿದ್ದು, ನಗರಸಭೆಯಿಂದ ಪರ್ಯಾಯ ವ್ಯವಸ್ಥೆ ಮಾಡದ ಕಾರಣ ಬಸ್ಗಳು ರಸ್ತೆಯಲ್ಲಿ ನಿಲ್ಲುವಂತಾಗಿದ್ದು ಪ್ರಯಾಣಿಕರು ಸಂಕಷ್ಟ ಪಡುತ್ತಿದ್ದಾರೆ.

ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಒಂದು ತಿಂಗಳಿನಿಂದ ನಡೆಯುತ್ತಿದ್ದರೂ ನಗರಸಭೆ ಬಸ್ಗಳ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ.

10 ವರ್ಷಗಳಿಂದ ಬಸ್ ನಿಲ್ದಾಣದ ಕಾಮಗಾರಿ ನಡೆಸುವುದಾಗಿ ಹೇಳುತ್ತಿದ್ದ ನಗರಸಭೆ ಕೊನೆಗೂ ₹1.20 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಂಡಿದೆ.

ನಗರಸಭೆ ಇಲ್ಲಿಂದ ಕೇವಲ ಅದಾಯ ನಿರೀಕ್ಷಿಸುತ್ತಿದ್ದು, ಹರಾಜಿನಿಂದ ಪ್ರತಿವರ್ಷ ₹2ರಿಂದ 3 ಲಕ್ಷ ಬರುತ್ತಿದೆ. ಜೊತೆಗೆ ಇಲ್ಲಿರುವ ಮಳಿಗೆಯಿಂದ ಲಕ್ಷಾಂತರ ರೂಪಾಯಿ ಆದಾಯ ಬರುತ್ತದೆ. ಪ್ರತಿನಿತ್ಯ ಖಾಸಗಿ ಬಸ್ ನಿಲ್ದಾಣಕ್ಕೆ 100ಕ್ಕೂ ಹೆಚ್ಚು ಬಸ್ಗಳು ಬರುತ್ತವೆ. ಕೆಲವು ಬಸ್ಗಳು ನಿಲ್ದಾಣಕ್ಕೆ 4ರಿಂದ 5 ಬಾರಿ ಬಂದು ಹೋಗುತ್ತವೆ. ಗ್ರಾಮೀಣ ಪ್ರದೇಶಗಳಿಗೆ ಹೋಗುವವರು ಬಹುತೇಕ ಖಾಸಗಿ ಬಸ್ಗಳನ್ನು ಆಶ್ರಯಿಸಿದ್ದರೆ ಈಗ ಬಸ್ ನಿಲ್ದಾಣದ ಕಾಮಗಾರಿ ನಡೆಯುತ್ತಿದ್ದು ಪ್ರಯಾಣಿಕರ ಅನುಕೂಲಕ್ಕೆ ಯಾವುದೇ ಗಮನ ನೀಡಿಲ್ಲ ಎನ್ನುವುದು ಸಾರ್ವಜನಿಕರ ದೂರು.

ಹಳೆಯ ರಾಷ್ಟ್ರೀಯ ಹೆದ್ದಾರಿ-4ಕ್ಕೆ ಖಾಸಗಿ ಬಸ್ ನಿಲ್ದಾಣ ಹೊಂದಿಕೊಂಡಿದ್ದು, ಈಗ ಕಾಮಗಾರಿ ನಡೆಯುತ್ತಿರುವುದರಿಂದ ಬಸ್ ನಿಲ್ದಾಣದ ಮುಂದಿನ ರಸ್ತೆಯಲ್ಲಿ ಬಸ್ಗಳನ್ನು ನಿಲ್ಲಿಸಲಾಗುತ್ತಿದೆ. ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣ ಎದುರಿಗೆ ಇರುವುದರಿಂದ ಇಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ರಸ್ತೆ ದಾಟುವುದು ಸಹ ಕಷ್ಟವಾಗುತ್ತಿದೆ. ಜೊತೆಗೆ ಇಲ್ಲಿ ರಸ್ತೆ ಬದಿಯಲ್ಲಿ ಆಟೊ ಹಾಗೂ ಹಣ್ಣು ಮಾರಾಟ ಗಾಡಿಗಳನ್ನು ನಿಲ್ಲಿಸಿಕೊಳ್ಳುವುದರಿಂದ ಹೆಚ್ಚು ದಟ್ಟಣೆಯಾಗುತ್ತಿದೆ. ಬೀದಿ ಬದಿಯ ಹೋಟೆಲ್ಗಳಿಂದ ಇನ್ನೂ ಹೆಚ್ಚು ತೊಂದರೆಯಾದರೂ ನಗರಸಭೆ ಮೌನವಾಗಿದೆ.

ಪ್ರಯಾಣಿಕರಿಗೆ ಕುಡಿಯುವ ನೀರಿಲ್ಲ, ನೆರಳಿನ ವ್ಯವಸ್ಥೆ ಇಲ್ಲ. ಕುಳಿತುಕೊಳ್ಳಲು ಆಸನವನ್ನೂ ಮಾಡಿಲ್ಲ. ಯಾವ ಊರಿಗೆ ಹೋಗುವ ಬಸ್ ಎಲ್ಲಿ ನಿಲ್ಲುತ್ತದೆ ಎನ್ನುವ ಮಾಹಿತಿ ಸಹ ಯಾರಿಗೂ ಇಲ್ಲ. ಪ್ರಯಾಣಿಕರು ಗಂಟೆಗಟ್ಟಲೆ ಬಸ್ಗಾಗಿ ಕಾದು ಕುಳಿತಿದ್ದು, ಅವರ ಊರಿಗೆ ಹೋಗುವ ಬಸ್ ಮುಂದೆ ನಿಲ್ಲಿಸಿಕೊಂಡಿರುವುದು ಇವರಿಗೆ ತಿಳಿಯುವುದೇ ಇಲ್ಲ. ಬಸ್ ಹೊರಟು ಹೋದ ಮೇಲೆ ನೋವು ಅನುಭವಿಸಬೇಕಿದೆ.

ಬಸ್ ನಿಲ್ದಾಣ ಬಳಿ ವಾಹನ ದಟ್ಟಣೆ ಹೆಚ್ಚಿ ಅಪಘಾತಗಳು ಹೆಚ್ಚುತ್ತಿದೆ. ರಸ್ತೆ ಬದಿ ನಿಲ್ಲಿಸುವ ವಾಹನಗಳನ್ನು ತೆರವುಗೊಳಿಸುವಷ್ಟರಲ್ಲಿ ಪೊಲೀಸರು ಹೈರಾಣಾಗುತ್ತಿದ್ದಾರೆ. ಮಕ್ಕಳು, ಹಿರಿಯ ನಾಗರಿಕರು, ಅಂಗವಿಕಲರು ರಸ್ತೆ ದಾಟುವುದು ದುಸ್ತರವಾಗಿದ್ದು ನಗರಸಭೆಗೆ ಹಿಡಿಶಾಪ ಹಾಕುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.