ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ ಉಪಚುನಾವಣೆ: ಜಯಚಂದ್ರ, ರಾಜೇಶ್ ಗೌಡ ಮತಚಲಾವಣೆ

ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೇ 44.13ರಷ್ಟು ಮತದಾನ
Last Updated 3 ನವೆಂಬರ್ 2020, 8:38 IST
ಅಕ್ಷರ ಗಾತ್ರ
ADVERTISEMENT
""
""

ತುಮಕೂರು: ಮಧ್ಯಾಹ್ನ 1 ಗಂಟೆಯ ವೇಳೆಗೆ ಶಿರಾ ಕ್ಷೇತ್ರದಲ್ಲಿ ಶೇ 44.13 ರಷ್ಟು ಮತದಾನವಾಗಿದೆ.

ತಾಲ್ಲೂಕಿನಲ್ಲಿ ಶಾಂತಿಯುತ ಮತದಾನವಾಗುತ್ತಿದೆ. ಗೋಮಾರದನಹಳ್ಳಿ, ದ್ವಾರಾಳು, ಹೊಸಹಳ್ಳಿ ಮತಗಟ್ಟೆಯಲ್ಲಿ ಜನರು ಸಾಲುಗಟ್ಟಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಶಿರಾದ ಜ್ಯೋತಿ ನಗರ ಮತಗಟ್ಟೆಯಲ್ಲಿ ಮತ್ತು ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ತಮ್ಮ ಸ್ವಗ್ರಾಮ ಚಿರತಹಳ್ಳಿಯಲ್ಲಿ ಮತದಾನ‌ ಮಾಡಿದರು.

ದಿ. ಶಾಸಕ ಸತ್ಯನಾರಾಯಣ ಅವರ ಪತ್ನಿಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರ ಸ್ವಗ್ರಾಮ ಭುವನಹಳ್ಳಿಯಲ್ಲಿ 10 ಗಂಟೆ ಸುಮಾರಿಗೆ ಶೇ 31ರಷ್ಟು ಮತದಾನವಾಗಿದೆ.

ಗ್ರಾಮದಲ್ಲಿ 33, 33a ಮತಗಟ್ಟೆಯಲ್ಲಿ ಮತದಾನ ನಡೆದಿದೆ. 33 ಮತಗಟ್ಟೆಯಲ್ಲಿ 582 ಮತಗಳಿದ್ದಯ 181 ಮತದಾನವಾಗಿದೆ.

33a ಮತಗಟ್ಟೆಯಲ್ಲಿ 646 ಮತಗಳಿದ್ದು 168 ಮತಗಳು ಚಲಾವಣೆ ಆಗಿದೆ.

ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ತಮ್ಮ ಸ್ವಗ್ರಾಮ ಚಿರತಹಳ್ಳಿಯಲ್ಲಿ ಮತದಾನ‌ ಮಾಡಿದರು.

ಸಮಾಧಿಗೆ ಪೂಜೆ
ತುಮಕೂರು:
ಭುವನಹಳ್ಳಿಯಲ್ಲಿರುವ ದಿ.ಶಾಸಕ ಸತ್ಯನಾರಾಯಣ ಅವರ ಸಮಾಧಿಗೆ ಬೆಳಿಗ್ಗೆಯೇ ಜೆಡಿಎಸ್ ಕಾರ್ಯಕರ್ತರು ಪೂಜೆ ಸಲ್ಲಿಸಿದ್ದಾರೆ.

ಸತ್ಯನಾರಾಯಣ ಪತ್ನಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಸೋಮವಾರ ಸಮಾಧಿಗೆ ಪೂಜೆ ಸಲ್ಲಿಸಿದ್ದರು.

ಗ್ರಾಮದ ಮುಖ್ಯರಸ್ತೆಯ ಬದಿ ಮೂರು ಪಕ್ಷಗಳ ಕಾರ್ಯಕರ್ತರು ಕುಳಿತು ಮತದಾನ ಕೇಂದ್ರಕ್ಕೆ ಬರುವವರಿಗೆ ಮತದಾನದ ಚೀಟಿ ನೀಡುತ್ತಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಮತಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT