ಶಿರಾ: ನಗರದ ಸರ್ಕಾರಿ ಆಸ್ಪತ್ರೆಗೆ ಹೆಚ್ಚು ರೋಗಿಗಳು ಬರುತ್ತಿದ್ದು ಬಯಲು ಸೀಮೆ ಜನರಿಗೆ ಅನುಕೂಲವಾಗುವಂತೆ ಶಿರಾದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಪ್ರಾರಂಭಿಸಲು ಕ್ರಮ ಕೈಗೊಳ್ಳುತ್ತಿದೆ. ಜಿಲ್ಲಾ ಆರೋಗ್ಯಾಧಿಕಾರಿ ಈ ಬಗ್ಗೆ ಶಿಫಾರಸು ಮಾಡಬೇಕು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ನಗರದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಬುಧವಾರ ಚೌಡೇಶ್ವರಿ ಚಾರಿಟಬಲ್ ಟ್ರಸ್ಟ್, ಟಿ.ಬಿ.ಜಯಚಂದ್ರ ಅಭಿಮಾನಿ ಬಳಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ, ಆರೋಗ್ಯ ತಪಾಸಣೆ ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರಿ ಮೆಡಿಕಲ್ ಕಾಲೇಜು ಪ್ರಾರಂಭಿಸಿದರೆ 50 ಎಕರೆ ಜಮೀನು ನೀಡಲಾಗುವುದು. ಇದಕ್ಕೆ ಮೊದಲು ಇಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಿಸಲಾಗುವುದು. ಹಿಂದೆ ಶಿರಾದಲ್ಲಿ ನಡೆಸಿದ ಮಡಿಲು ಕಾರ್ಯಕ್ರಮದಿಂದ ಪ್ರೇರಣೆ ಪಡೆದು ಈಗ ರಾಜ್ಯದ ಎಲ್ಲಾ ಕಡೆ ಮಡಿಲು ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಚೌಡೇಶ್ವರಿ ಚಾರಿಟಬಲ್ ಟ್ರಸ್ಟ್ನ ಅನಂತರಾಮು, ನಿರ್ಮಲ ಜಯಚಂದ್ರ, ಸಂಜಯ್ ಜಯಚಂದ್ರ, ಡಿಎಚ್ಒ ಡಾ. ಚಂದ್ರಶೇಖರ್, ಮೋಹನ್ ಸಿ.ಆರ್., ಡಾ.ದುರ್ಗಾದಾಸ್ ಅರಸಣ್ಣ, ಡಾ.ಸಿದ್ದೇಶ್ಬರ್, ಡಾ.ಡಿ.ಎಂ.ಗೌಡ, ಡಾ.ಬಾಬು ರಾಜೇಂದ್ರ ಪ್ರಸಾದ್, ನಗರಸಭೆ ಅಧ್ಯಕ್ಷ ಜೀಷಾನ್ ಮಹಮೂದ್, ಅಬ್ದುಲ್ಲಾಖಾನ್, ಬಿ.ಎಂ.ರಾಧಕೃಷ್ಣ, ಜಾಫರ್, ಬಿ.ಎಸ್.ಸತ್ಯನಾರಾಯಣ, ಎಚ್.ಗುರುಮೂರ್ತಿ ಗೌಡ, ಗುಳಿಗೇನಹಳ್ಳಿ ನಾಗರಾಜು, ಅಜೇಯ್ ಕುಮಾರ್ ಗಾಳಿ, ಅಂಜನ್ ಕುಮಾರ್, ಮಣಿಕಂಠ, ಹೇಮಂತ್, ಶೋಭಾ ನಾಗರಾಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.