ಮಂಗಳವಾರ, ಡಿಸೆಂಬರ್ 1, 2020
18 °C

ಶಿರಾ: ಕೆರೆಯಲ್ಲಿ ಮುಳುಗಿ ಅಕ್ಕ ತಂಗಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾ: ತಾಲ್ಲೂಕಿನ ಕಳ್ಳಂಬೆಳ್ಳ ಕೆರೆಯಲ್ಲಿ ಭಾನುವಾರ ಗ್ರಾಮದ ತಿಪ್ಪೇಸ್ವಾಮಿ ಅವರ ಮಕ್ಕಳಾದ ಶಿಲ್ಪಾ (18) ಮತ್ತು ಸುಶ್ಮಿತಾ (16) ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. 

ಬೆಂಗಳೂರಿನಿಂದ ಬಂದಿದ್ದ ಸಂಬಂಧಿ ಸಂಜನಾ ಜೊತೆ ಶಿಲ್ಪಾ ಮತ್ತು ಸುಶ್ಮಿತಾ ಕೆರೆ ಬಳಿ ತೆರಳಿದ್ದರು. 

ಕೆರೆಗೆ ಮೂವರು ಇಳಿದಿದ್ದಾರೆ. ಈ ವೇಳೆ ಶಿಲ್ಪಾ ಮತ್ತು ಸುಶ್ಮಿತಾ ಅವರ ಕಾಲು ಜಾರಿದ್ದು ನೀರಿನಲ್ಲಿ ಮುಳುಗಿದರು. 

ಸಂಜನಾ ಕೂಗಾಟ ಕೇಳಿ ಅಕ್ಕ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು ರಕ್ಷಣೆಗೆ ಧಾವಿಸಿದರೂ ಪ್ರಯೋಜನವಾಗಲಿಲ್ಲ. ‌ಅಗ್ನಿಶಾಮಕ ದಳದ ಸಿಬ್ಬಂದಿ ದೇಹಗಳನ್ನು ಹೊರ ತೆಗೆದರು. 

ಕಳ್ಳಂಬೆಳ್ಳ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು